ಮೈಸೂರು: ನಟ ಪ್ರಭುದೇವ (Actor Prabhudeva) ಅವರಿಂದು ನಂಜನಗೂಡು ತಾಲ್ಲೂಕಿನ ಕೆಂಬಾಲು ಗ್ರಾಮದಲ್ಲಿ ದೇವಸ್ಥಾನ ಜೀರ್ಣೋದ್ಧಾರ (Temple Renovation) ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ತಾಯಿಯ ಆಸೆ ನೆರವೇರಿಸಿದ್ದಾರೆ.
ಕೆಂಬಾಲು ಗ್ರಾಮದಲ್ಲಿ ಚೋಳರ ಕಾಲದಲ್ಲಿ ನಿರ್ಮಾಣವಾಗಿದ್ದ ಮಹದೇಶ್ವರ ಸ್ವಾಮಿ ದೇವಸ್ಥಾನವು (Mahadeshwara Swamy Temple) ಶಿಥಿಲಾವಸ್ಥೆ ಕಂಡಿತ್ತು. ಇದನ್ನು ನೋಡಿದ ಪ್ರಭುದೇವ ತಾಯಿ ಅವರು ಸ್ವಂತ ಖರ್ಚಿನಲ್ಲೇ ದೇವಸ್ಥಾನ ಜೀರ್ಣೋದ್ಧಾರ ಮಾಡಿಸುವಂತೆ ಮಗ ಪ್ರಭುದೇವ ಅವರಿಗೆ ತಾಕೀತು ಮಾಡಿದ್ದರು.
ಈ ಹಿನ್ನೆಲೆಯಲ್ಲಿ ತಾಯಿ ಆಸೆಯಂತೆ ದೇವಸ್ಥಾನವನ್ನು 25 ಲಕ್ಷ ರೂ ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಿ, ಇಂದು ಹೋಮ ಹವನ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ:- ರಾಜ್ಯದ ಹಲವೆಡೆ ಇನ್ನೂ ಒಂದು ವಾರ ಧಾರಾಕಾರ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ
ಪ್ರಭುದೇವ ಅವರ ಜೊತೆ ಪತ್ನಿಯೂ ಪೂಜೆಯಲ್ಲಿ ಭಾಗಿಯಾಗಿದ್ದು ವಿಶೇಷವೆನಿಸಿತ್ತು. ದೇವಸ್ಥಾನದಲ್ಲಿ ಪ್ರಭುದೇವರನ್ನು ನೋಡಿದ ಅಭಿಮಾನಿಗಳು ಸೆಲ್ಫಿ ತೆಗೆದುಕೊಳ್ಳಲು ಮುಗಿಬಿದ್ದರು.





