Mysore
27
overcast clouds

Social Media

ಭಾನುವಾರ, 20 ಏಪ್ರಿಲ 2025
Light
Dark

ಮೈಸೂರು ಪಾಲಿಕೆಯಿಂದ 1515 ಕೆಜಿ ಪ್ಲಾಸ್ಟಿಕ್‌ ವಶ: 1,61 ಲಕ್ಷ ದಂಡ ವಸೂಲಿ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರನ್ನು ಪ್ಲಾಸ್ಟಿಕ್‌ ಮುಕ್ತ ನಗರವನ್ನಾಗಿಸಲು ನಗರ ಪಾಲಿಕೆ ಹಲವಾರು ಕಾರ್ಯಕ್ರಮಗಳನ್ನು ಯೋಜಸುತ್ತಾ ಬರುತ್ತಿದೆ.

ನಗರ ಪಾಲಿಕೆಯಿಂದ ನಿಷೇಧಿತ ಪ್ಲಾಸ್ಟಿಕ್‌ ಬಳಕೆ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಾ ಬರುತ್ತಿದ್ದು, ನಿನ್ನೆ (ಮೇ.16) ಒಟ್ಟು 9 ವಲಯ ಕಚೇರಿ ವ್ಯಾಪ್ತಿಯಲ್ಲಿ ಕಾರ್ಯಚರಣೆ ನಡೆಸಿದ ನಗರ ಪಾಲಿಕೆ 1515 ಕೆಜಿ ಪ್ಲಾಸ್ಟಿಕ್‌ ವಶಪಡಿಸಿಕೊಂಡಿದೆ. ಹಾಗೂ 1,61 ಲಕ್ಷ ದಂಡ ವಸೂಲಿ ಮಾಡಿದೆ.

ಸೂಕ್ತ ಮಾಹಿತಿ ಮೇರೆಗೆ ಆಯಕ್ತರ ಆದೇಶದಂತೆ ನಗರದ ಧನ್ವಂತ್ರಿ ರಸ್ತೆಯಲ್ಲಿರುವ, ಮಲ್ಲೇಶ್‌ ಎಂಬುವವರಿಗೆ ಸೇರಿದ ಧನ್ವಂತ್ರ ಎಂಟರ್‌ಪ್ರೈಸಸ್‌ ಗೋದಾಮಿಗೆ ವಲಯ ಆಯುಕ್ತರ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ಗೋದಾಮಿನಲ್ಲಿ ಸಂಗ್ರಹಿಸಿದ್ದ ನಿಷೇಧಿತ ಪ್ಲಾಸ್ಟಿಕ್‌ನ್ನು ವಶಪಡಿಸಿಕೊಂಡು 25 ಸಾವಿರ ರೂ ದಂಡ ವಿಧಿಸಿದ್ದಾರೆ.

Tags: