ಮೈಸೂರು : ಸೈಬರ್ ವಂಚಕರು ನಗರದ ಇಬ್ಬರಿಂದ ೩೧ ಲಕ್ಷ ರೂ.ಗೂ ಹೆಚ್ಚು ಹಣ ಲಪಟಾಯಿಸಿರುವ ಸಂಬಂಧ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಸ್ವ-ಉದ್ಯೋಗಿ ಮಹಿಳೆಯೊಬ್ಬರು ನಕಲಿ ಟ್ರೇಡಿಂಗ್‌ನಲ್ಲಿ ಹಣ ಹೂಡಿಕೆ ಮಾಡಿ ೧೯.೭೪ ಲಕ್ಷ ಹಾಗೂ ಎಪಿಕೆ ಫೈಲ್‌ಗಳ ಡೌನ್‌ಲೋಡ್ ಆಗಿದ್ದರಿಂದ ಖಾಸಗಿ ಸಂಸ್ಥೆ ಉದ್ಯೋಗಿ ೧೧.೬೯ ಲಕ್ಷ ಹಣ ಕಳೆದುಕೊಂಡಿದ್ದಾರೆ.
ಐಪಿಎಸ್ ಶ್ರಿನಿವಾಸನಗರದ ಮಹಿಳೆ, ನಾಲ್ಕು ತಿಂಗಳ ಹಿಂದೆ ಫೇಸ್‌ಬುಕ್‌ನಲ್ಲಿ ಟ್ರೇಡಿಂಗ್ ಜಾಹೀರಾತು ನೋಡಿ, ಅದರಲ್ಲಿದ್ದ ಲಿಂಕ್ ಕ್ಲಿಕ್ ಮಾಡಿದ್ದಾರೆ. ನಂತರ ತಮ್ಮ ಹೆಸರು ಹಾಗೂ ಮೊಬೈಲ್ ನಂಬರ್ ನಮೂದಿಸಿ, ರಿಜಿಸ್ಟರ್ ಮಾಡಿಕೊಂಡಿ ದ್ದಾರೆ. ಕೂಡಲೇ ರಾಘವ್ ರಾಮ ಚಂದ್ರ ಹೆಸರಿನಲ್ಲಿ ಇಮೇಲ್ ಮೂಲಕ ಲಿಂಕ್ ಬಂದಿದ್ದು, ಅದರ ಮೂಲಕ ಮಹಿಳೆ ಟ್ರೇಡಿಂಗ್ ಅಕೌಂಟ್ ತೆರೆದಿದ್ದಾರೆ.
ಇದನ್ನು ಓದಿ: ಸೈಬರ್ ಪೊಲೀಸ್ ಸೋಗಿನಲ್ಲಿ ವಂಚನೆ : ಮಹಿಳೆ ಸೇರಿದಂತೆ ಐದು ಮಂದಿ ಬಂಧನ
ನಂತರ ನಿಖಿಲ್ ಗೌಡ ಹೆಸರಿನಲ್ಲಿ ಕರೆ ಮಾಡಿದ ವ್ಯಕ್ತಿಯೊಬ್ಬ, ತನ್ನನ್ನು ಹಣಕಾಸು ಸಲಹೆಗಾರ ಎಂದು ಪರಿಚಯಿಸಿ ಕೊಂಡು, ಹೈ ವಾಲ್ಯೂಂ ಟ್ರೇಡಿಂಗ್ ಬಗ್ಗೆ ಮಾಹಿತಿ ನೀಡಿದ್ದಾನೆ ಬಳಿಕ ಸೂರಜ್ ರೆಡ್ಡಿ ಹೆಸರಿನಲ್ಲಿ ಕರೆ ಮಾಡಿದ ಮತ್ತೋರ್ವನೂ ಹಣಕಾಸು ಸಲಹೆಗಾರ ನೆಂದು ಹೇಳಿಕೊಂಡು ಟ್ರೇಡಿಂಗ್‌ನಲ್ಲಿ ಭಾರೀ ಲಾಭ ಸಿಗಲಿದೆ ಎಂದು ತಿಳಿಸಿದ್ದಾನೆ.
ಇವರುಗಳ ಮಾತು ನಂಬಿದ ಮಹಿಳೆ ಹಂತ ಹಂತವಾಗಿ ೧೯,೭೪,೭೦೦ ರೂ.ಗಳನ್ನು ವರ್ಗಾವಣೆ ಮಾಡಿದ್ದಾರೆ. ಒಮ್ಮೆ ಹಣವನ್ನು ವಿತ್ ಡ್ರಾ ಮಾಡಲು ಯತ್ನಿಸಿದಾಗ ತೆರಿಗೆ ಮೊತ್ತ ಪಾವತಿ ಸುವಂತೆ ಸೂಚಿಸಲಾಗಿದೆ. ಅದರಂತೆ ಹಣ ಪಾವತಿಸಿದ ನಂತರವೂ ವಿತ್‌ಡ್ರಾ ಸಾಧ್ಯವಾಗದಿದ್ದಾಗ ಸೆನ್ ಪೊಲೀಸರಿಗೆ ದೂರು ನೀಡಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಮೈಸೂರು ತಾಲೂಕು ನಾಡನಹಳ್ಳಿ ನಿವಾಸಿಯೊಬ್ಬರ ಮೊಬೈಲ್‌ಗೆ ಬಂದ ಎಪಿಕೆ ಫೈಲ್‌ಗಳು ಡೌನ್ಛೋಡ್ ಆದ ಬಳಿಕ ಅವರ ಬ್ಯಾಂಕ್ ಖಾತೆಗೆ ಕನ್ನ ಹಾಕಲಾಗಿದೆ. ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿನ ಅವರ ಖಾತೆಯಿಂದ ೧೧,೬೯,೬೦೦ ರೂ. ಅಪರಿಚಿತರ ಖಾತೆಗೆ ವರ್ಗಾ ವಣೆಗೊಂಡಿದ್ದು, ಈ ಸಂಬಂಧ ದೂರು ದಾಖಲಿಸಿಕೊಂಡಿರುವ ಪೊಲೀಸರು, ಮುಂದಿನ ಕ್ರಮ ಕೈಗೊಂಡಿದ್ದಾರೆ.





