Mysore
23
haze

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಮೈಸೂರು | ಮನೆಯಲ್ಲಿ ಕಳ್ಳತನ ; ಸುಮಾರು 1 ಕೋಟಿ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿ ವಸ್ತುಗಳು ಕಳ್ಳರ ಪಾಲು

ಮೈಸೂರು : ಮನೆಯ ಮುಂಬಾಗಿಲನ್ನು ಮುರಿದು ಒಳ ನುಗ್ಗಿರುವ ಕಳ್ಳರು ಸುಮಾರು ೧ ಕೋಟಿ ರೂ. ಮೌಲ್ಯದ ಚಿನ್ನಾಭರಣ ಮತ್ತು ಬೆಳ್ಳಿ ವಸ್ತುಗಳನ್ನು ದೋಚಿ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ನಗರದ ದಟ್ಟಗಳ್ಳಿ ೩ನೇ ಹಂತದ ಕನಕದಾಸನಗರ ’ಜೆ’ಬ್ಲಾಕ್‌ನಲ್ಲಿ ವಾಸಿಸುತ್ತಿರುವ ಸಾಫ್ಟ್‌ವೇರ್ ಎಂಜಿನಿಯರ್ ವಿನಯ್ ಕುಮಾರ್ ಅವರ ಮನೆಯಲ್ಲಿ ಈ ಘಟನೆ ನಡೆದಿದೆ.

ಇದನ್ನೂ ಓದಿ:-ಮೈಸೂರು | ಮನೆಯಲ್ಲಿ ಕಳ್ಳತನ ; ಸುಮಾರು 1 ಕೋಟಿ ರೂ. ಮೌಲ್ಯದ ಚಿನ್ನ ಮತ್ತು ಬೆಳ್ಳಿ ವಸ್ತುಗಳು ಕಳ್ಳರ ಪಾಲು

ಅ.೨೦ ರಂದು ವಿನಯ್ ತನ್ನ ಪತ್ನಿ ಮತ್ತು ಮಕ್ಕಳೊಂದಿಗೆ ಚಿಕ್ಕಮಗಳೂರಿಗೆ ಕುಟುಂಬ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ತೆರಳಿದ್ದರು. ಅ.೨೧ ರಂದು ಮಧ್ಯಾಹ್ನ ೩ ಗಂಟೆಗೆ ಹಿಂತಿರುಗಿದ್ದರು.
ವಿನಯ್ ಮುಂಭಾಗದ ಬಾಗಿಲು ತೆರೆದಿರುವುದನ್ನು ನೋಡಿ ಆಘಾತಕ್ಕೊಳಗಾಗಿದ್ದರು.

ಮನೆಯೊಳಗೆ ಪ್ರವೇಶಿಸಿದಾಗ ಮಲಗುವ ಕೋಣೆಯಲ್ಲಿದ್ದ ವಾಡ್ರೂಬ್‌ನಲ್ಲಿ ಇರಿಸಲಾಗಿದ್ದ ಬೆಲೆಬಾಳುವ ವಸ್ತುಗಳು ಕಳ್ಳತನವಾಗಿರುವುದನ್ನು ಗೊತ್ತಾಗಿದೆ. ಖದೀಮರು ಸುಮಾರು ೭೦೦ ಗ್ರಾಂ ತೂಕದ ಚಿನ್ನದ ಆಭರಣಗಳು, ನಾಲ್ಕು ಸರಗಳು, ಮೂರು ಆಭರಣ ಸೆಟ್‌ಗಳು, ಐದು ಬಳೆಗಳು, ಎಂಟು ಕಿವಿಯೋಲೆಗಳು, ೧೦ ಉಂಗುರಗಳು ಮತ್ತು ೩ ಕೆಜಿ ಬೆಳ್ಳಿ ವಸ್ತುಗಳು ಕಳುವಾಗಿವೆ, ತಕ್ಷಣ, ವಿನಯ್ ಸರಸ್ವತಿಪುರಂ ಪೊಲೀಸರಿಗೆ ಮಾಹಿತಿ ನೀಡಿದಾಗ, ಪೊಲೀಸರು ಶ್ವಾನ ದಳ ಮತ್ತು ಬೆರಳಚ್ಚು ತಜ್ಞರೊಂದಿಗೆ ಬಂದು ಮಹಜರು ನಡೆಸಿದರು. ಈ ಸಂಬಂದ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:
error: Content is protected !!