ಮೈಸೂರು : NFHS-5 ವರದಿಯ ಪ್ರಕಾರ ಮೈಸೂರು ಜಿಲ್ಲೆಯ SAM ಮಕ್ಕಳ ಪ್ರಮಾಣ 7.2% ಇದ್ದು ಪ್ರಸ್ತುತ 0.21% ಗೆ ಇಳಿಕೆಯಾಗಿರುತ್ತದೆ. MAM ಮಕ್ಕಳ ಪ್ರಮಾಣ 15.6% ಇದ್ದು ಪ್ರಸ್ತುತ 1.05% ಗೆ ಇಳಿಕೆಯಾಗಿದ್ದು SAM ಮತ್ತು MAM ಮಕ್ಕಳ ಪ್ರಮಾಣ ಗಣನೀಯವಾಗಿ ಇಳಿಕೆಯಾಗುತ್ತಿರುವುದು ಕಂಡು ಬಂದಿರುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.
ನವೆಂಬರ್-2025 ಮಾಹೆಯಲ್ಲಿ 0-6 ತಿಂಗಳಿಗೆ ಒಳಪಡುವ 90 ಮಕ್ಕಳು SAM (ತೀವ್ರ ಅಪೌಷ್ಟಿಕ ಮಕ್ಕಳು) ಹಾಗೂ 137 ಮಕ್ಕಳು MAM (ಸಾಧಾರಣಾ ಅಪೌಷ್ಠಿಕ ಮಕ್ಕಳು) ಎಂದು ಗುರುತಿಸಲ್ಪಟ್ಟಿದ್ದು ಸದರಿ ಮಕ್ಕಳಿಗೆ ನಿಯಮಿತ ಆರೋಗ್ಯ ತಪಾಸಣೆ ಜೊತೆಗೆ ತಾಯಿಯ ಎದೆ ಹಾಲನ್ನು ಕ್ರಮಬದ್ಧವಾಗಿ ನೀಡುವಂತೆ ಪೋಷಕರಿಗೆ ಅರಿವು ಮೂಡಿಸಲಾಗುತ್ತಿದೆ.
ಸ್ಥಳೀಯವಾಗಿ ಸಿಗುವ ಸೊಪ್ಪು ತರಕಾರಿಗಳನ್ನು ಹೆಚ್ಚು ಬಳಸುವಂತೆ, ಸ್ವಚ್ಛತೆ ಕಾಪಾಡುವಂತೆ ಸಮುದಾಯಕ್ಕೆ ಅರಿವು ಮೂಡಿಸಲಾಗುತ್ತಿದೆ. ಇದರ ಜೊತೆಗೆ ಇಲಾಖೆಯಿಂದ ಗರ್ಭಿಣಿ ಮತ್ತು ಬಾಣಂತಿ ಮಹಿಳೆಯರಿಗೆ ಪೌಷ್ಠಿಕ ಆಹಾರವನ್ನು ನೀಡಲಾಗುತ್ತಿದೆ.0-6 ತಿಂಗಳಿಗೆ ಮಕ್ಕಳು ತಾಯಿಯ ಎದೆಹಾಲಿನ ಜೊತೆಗೆ ಪೂರಕ ಆಹಾರವನ್ನು ಸೇವಿಸುವುದರಿಂದ ಅಪೌಷ್ಟಿಕತೆಯಿಂದ ಹೊರ ಬರುವ ಪ್ರಮಾಣ ಹೆಚ್ಚಿರುತ್ತದೆ.
6 ತಿಂಗಳಿಂದ 6 ವರ್ಷದ ಮಕ್ಕಳಲ್ಲಿ 129 SAM (ತೀವ್ರ ಅಪೌಷ್ಠಿಕ ಮಕ್ಕಳು) ಹಾಗೂ 947 ಮಕ್ಕಳು MAM (ಸಾಧಾರಣಾ ಅಪೌಷ್ಠಿಕ ಮಕ್ಕಳು) ಎಂದು ಗುರುತಿಸಲ್ಪಟ್ಟಿದ್ದು SAM ಮಕ್ಕಳಿಗೆ ಇಲಾಖಾ ವತಿಯಿಂದ ಕ್ಷೀರಭಾಗ್ಯ ಯೋಜನೆಯಿಂದ ಹಾಲು ಹಾಗೂ ಸೃಷ್ಟಿ ಯೋಜನೆಯಿಂದ ವಾರದಲ್ಲಿ 5 ಮೊಟ್ಟೆಯನ್ನು ನೀಡಲಾಗುತ್ತಿದ್ದು ಹೆಚ್ಚುವರಿ ಆಹಾರ ಪದಾರ್ಥಗಳನ್ನು ನೀಡಲಾಗುತ್ತಿದೆ.
ಇದನ್ನೂ ಓದಿ:-ಅಧಿಕಾರ ಕಿತ್ತಾಟ ಬಿಟ್ಟು ಅಭಿವೃದ್ಧಿ ಚರ್ಚೆ ನಡೆಯಲಿ : ಶಾಸಕ ಜಿ.ಟಿ.ದೇವೇಗೌಡ
ಇದರ ಜೊತೆಗೆ CFTRI ಮೈಸೂರು ಇವರ ವತಿಯಿಂದ SAM & MAM ಮಕ್ಕಳಿಗೆ ರಕ್ತ ಪರೀಕ್ಷೆಗೆ ಒಳಪಡಿಸಿ ಹೆಚ್ಚುವರಿಯಾಗಿ ಈ ಕೆಳಕಂಡಂತೆ ಪೌಷ್ಠಿಕ ಆಹಾರವನ್ನು ನೀಡಲಾಗುತ್ತಿದ್ದು, 6 ತಿಂಗಳ ಕಾಲ ಅನುಸರಣೆ ಮಾಡಲಾಗುತ್ತಿದೆ.
CFTRI ಮೈಸೂರು ಇವರ ವತಿಯಿಂದ SAM & MAM ಮಕ್ಕಳಿಗೆ ನೀಡಲಾಗುತ್ತಿರುವ ಆಹಾರ ಪದಾರ್ಥಗಳ ವಿವರ: ಸೋಮವಾರ-ಎನರ್ಜಿ & ಪ್ರೋಟೀನ್ ರಿಚ್ ಬರ್ಫಿ, ಮಂಗಳವಾರ- ಹೈ ಪ್ರೋಟೀನ್ & ಐರನ್ ರಿಚ್ ಬಿಸ್ಕಟ್, ಬುಧವಾರ-ಮ್ಯಾಂಗೋ ಬಾರ್ ಮತ್ತು ಸ್ಪಿರುಲಿನಾ ಚಿಕ್ಕಿ, ಗುರವಾರ-ಎನರ್ಜಿ & ಪ್ರೋಟೀನ್ ರಿಚ್ ಬರ್ಫಿ, ಶುಕ್ರವಾರ- ಮ್ಯಾಂಗೋಬಾರ್+ಗ್ಲುಕೋಸ್ ಆಮ್ಲ ಬಿವರೇಜ್, ಶನಿವಾರ-ಹೈ ಪ್ರೋಟೀನ್ & ಐರನ್ ರಿಚ್ ಬಿಸ್ಕಟ್ಸ್ ನೀಡಲಾಗುತ್ತಿದೆ
ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ಪ್ರತಿ ತಿಂಗಳು ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಆರೋಗ್ಯ ತಪಾಸಣೆಯಿಂದ ಗುರುತಿಸಿರುವ ತೀವ್ರ ಅಪೌಷ್ಠಿಕ ಮಕ್ಕಳನ್ನು ಎನ್ ಆರ್ ಸಿ ಗೆ ದಾಖಲಿಸಲಾಗುತ್ತಿದೆ.
ಜಿಲ್ಲೆಯಲ್ಲಿ SAM ಮತ್ತು MAM ಮಕ್ಕಳ ಅಪೌಷ್ಠಿಕತೆಯಿಂದ ಹೊರ ತರಲು ಆರೋಗ್ಯ ಇಲಾಖೆ, CFTRI ಹಾಗೂ ಪೋಷಕರ ಸಹಯೋಗದೊಂದಿಗೆ ಪರಿಣಾಮಕಾರಿಯಾಗಿ ಮಕ್ಕಳ ಸುಧಾರಣೆಯತ್ತ ಗಮನಹರಿಸಲಾಗುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





