ಮೈಸೂರು: ನಾಡಿನಾದ್ಯಂತ ಗಣೇಶ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಲಾಗುತ್ತಿದೆ. ಸಾರ್ವಜನಿಕ ಸ್ಥಳ ಹಾಗೂ ಮನೆಗಳಲ್ಲಿ ವಿನಾಯಕನನ್ನು ಕೂರಿಸಿ, ವಿಶೇಷ ಅಲಾಂಕಾರ ಮಾಡಿ ಪೂಜಿಸಲಾಗುತ್ತಿದೆ.
ಸದ್ಯ ಮೈಸೂರಲ್ಲಿ ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದ್ದು, ಎಲ್ಲೆಡೆ ಗಣೇಶ ವಿಗ್ರಹಗಳನ್ನು ಕೂರಿಸಲಾಗುತ್ತಿದೆ. ಪ್ರತಿ ಏರಿಯಾಗಳಲ್ಲೂ ವಿನಾಯಕ ಗೆಳೆಯರ ಬಳಗದಿಂದ ಗಣಪನನ್ನು ವಾದ್ಯ ಶಬ್ದಗಳೊಂದಿಗೆ ಬರಮಾಡಿಕೊಂಡು ಹಬ್ಬದ ವೈಭವವನ್ನು ಹೆಚ್ಚಿಸಿದ್ದಾರೆ.
ಇನ್ನೂ ಗಣೇಶ ವಿಗ್ರಹಗಳು ಕೂಡ ನೋಡುಗರ ಕಣ್ಮನ ಸೆಳೆಯುತ್ತಿವೆ. ನಗರದ ಕಲಾವಿದ ರೇವಣ್ಣ ಕೈಚಳಕದಲ್ಲಿ ಮೂಡಿಬಂದ ವಿಭಿನ್ನ ಗಣೇಶ ಮೂರ್ತಿಗಳು ನೋಡುಗರನ್ನು ಮಂತ್ರ ಮುಗ್ದರನ್ನಾಗಿಸುತ್ತಿವೆ.
ಗಣಪತಿ ಪಕ್ಕದಲ್ಲಿ ಪ್ರಧಾನಿ ನರೇಂದ್ರ ಮೋದಿ, ಸಂಸದ ಯದುವೀರ್, ಅಯೋಧ್ಯಾ ರಾಮಲಲ್ಲಾ ವಿಗ್ರಹದ ಜೊತೆ ಗಣೇಶ್, ಮೇಘಾಲಯದ ರಾಜ್ಯಪಾಲರಾದ ಕನ್ನಡಿಗ ಸಿ.ಎಚ್ ವಿಜಯಶಂಕರ್, ನಟ ರಿಷಬ್ ಶೆಟ್ಟಿ, ಪುನೀತ್ ರಾಜ್‌ಕುಮಾರ್ ಸೇರಿದಂತೆ ಹಲವು ಮೂರ್ತಿಗಳನ್ನು ನಿಲ್ಲಿಸಲಾಗಿದೆ.