Mysore
31
clear sky

Social Media

ಮಂಗಳವಾರ, 11 ಫೆಬ್ರವರಿ 2025
Light
Dark

ಮೈಸೂರು | ರಸ್ತೆ ಅಪಘಾತ; ಯುವಕ ಸಾವು

ಮೈಸೂರು: ಬೈಕ್‌ನಲ್ಲಿ ತೆರಳುತ್ತಿದ ವೇಳೆ ಅಪಘಾತವಾಗಿ ಯುವಕ ಸಾವನ್ನಪ್ಪಿರುವ ಘಟನೆ ಮೈಸೂರಿನ ಹೂಟಗಳ್ಳಿ ಬಳಿ ನಡೆದಿದೆ.

ರಾಕಿ(30) ಸಾವನ್ನಪ್ಪಿದ ಯುವಕ. ಹೂಟಗಳ್ಳಿ ಮಾರ್ಗದಲ್ಲಿ ತೆರಳುವಾಗ ಬೈಕ್‌ನಲ್ಲಿ ಬಿದ್ದು ರಾಕಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತಪಟ್ಟ ಯುವಕನ ಶವವನ್ನು ಮೈಸೂರಿನ ಕೆ.ಆರ್‌. ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದ್ದು, ಶವಗಾರದ ಮುಂದೆ ತಾಯಿ ಮತ್ತು ಪತ್ನಿಯ ಆಕ್ರಂದನ ಮುಗಿಲು ಮುಟ್ಟಿದೆ.

ಹಿನಕಲ್‌ನ ಎಸ್‌ ಆರ್‌ ಎಸ್‌ ನಲ್ಲಿ ರಾಕಿ ವಾಸವಿದ್ದರು. ಇಂದು ಅಪಘಾತದಲ್ಲಿ ರಾಕಿ ಕೊನೆಯುಸಿರೆಳೆದಿದ್ದು, ಮಗನನ್ನ ಕಳೆದುಕೊಂಡ ಕುಟುಂಬಕ್ಕೆ ದಿಕ್ಕು ತೋಚದಂತಾಗಿದೆ.

Tags: