ಮೈಸೂರು : ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತದ ವತಿಯಿಂದ ರಾಮಕೃಷ್ಣನಗರ ಉಪ ವಿಭಾಗದ ವ್ಯಾಪ್ತಿಯ ೬೬/೧೧ ಕೆ.ವಿ. ಉದ್ಬೂರು ವಿದ್ಯುತ್ ವಿತರಣಾ ಕೇಂದ್ರ ಮತ್ತು ೬೬/೧೧ ಕೆ.ವಿ. ಜಯಪುರ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ಡಿ.೨ರಂದು ತುರ್ತು ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಅಂದು ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೬ ಗಂಟೆಯವರೆಗೆ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಉದ್ಬೂರು ವಿವಿ ಕೇಂದ್ರದ ವ್ಯಾಪ್ತಿಯ ಪ್ರದೇಶಗಳು:
ಉದ್ಬೂರು, ಕೆಲ್ಲಹಳ್ಳಿ, ಟಿ.ಕಾಟೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳು. ಜಯಪುರ ವಿವಿ ಕೇಂದ್ರದ ವ್ಯಾಪ್ತಿಯ ಪ್ರದೇಶಗಳು: ಜಯಪುರ, ಬರಡನ ಪುರ, ಮಾವಿನಹಳ್ಳಿ, ದಾರಿಪುರ, ಡಿ. ಸಾಲುಂಡಿ, ಧನಗಳ್ಳಿ, ದೊಡ್ಡಹುಂಡಿ, ಕೆಂಚಲಗೂಡು, ಕೆಹೆಚ್ಬಿ, ಗೋಪಾಲಪುರ, ಮುಳ್ಳೂರು, ಹಾರೋಹಳ್ಳಿ, ಜಿ.ಜಿ. ಪುರ, ಮಂಡನಹಳ್ಳಿ, ಕಾಡನಹಳ್ಳಿ, ಮಾರ್ಬಳ್ಳಿ, ಮಾರ್ಬಳ್ಳಿ ಹುಂಡಿ, ಅರಸಿನಕೆರೆ, ಸೋಲಿಗರ ಕಾಲೋನಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ವಿ.ವಿ ಮೊಹಲ್ಲಾ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ:-ಕೊಳ್ಳೇಗಾಲ | ಕಾರುಗಳ ನಡುವೆ ಡಿಕ್ಕಿ : ನಾಲ್ವರು ಗಂಭೀರ
ಡಿ.3ರಂದೂ ವಿದ್ಯುತ್ ಇರಲ್ಲ
ಇನ್ನೂ ಬನ್ನಿಮಂಟಪ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಕ.ವಿ.ಪ್ರ.ನಿ.ನಿ. ವತಿಯಿಂದ ಡಿ.೩ರಂದು ೩ನೇ ತ್ರೈಮಾಸಿಕ ಅವಧಿಯ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಅಂದು ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೬ ಗಂಟೆಯವರೆಗೆ ಕೆಲವು ಸೂಚಿತ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯ ಯವಾಗಲಿದೆ.
ಪ್ರದೇಶಗಳು: ಶಿವರಾತ್ರೀಶ್ವರ ನಗರ, ಕಾವೇರಿನಗರ, ಸಿದ್ದಿಕಿ ನಗರ ಬಿ ಮತ್ತು ಸಿ ಬಡಾವಣೆ, ಬನ್ನಿಮಂಟಪ, ಹೈವೇವೃತ್ತ, ಮೇದರ್ ಬ್ಲಾಕ್, ಹನುಮಂತನಗರ, ಹಲೀಂನಗರ, ಬಾಲಭವನ, ಜೆಎಸ್‌ಎಸ್‌ನಗರ ಡೆಂಟಲ್ ಕಾಲೇಜ್, ಸೇಂಟ್ ಜೋಸೆಫ್ ಆಸ್ಪತ್ರೆ, ಲಕ್ಷ್ಮೀಪುರ, ವರುಣ, ಸಿದ್ದಲಿಂಗಪುರ, ಕಳಸ್ತವಾಡಿ, ಶಾದನಹಳ್ಳಿ, ನಾಗನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕು ಎಂದು ಸೆಸ್ಕ್ ಎನ್.ಆರ್.ಮೊಹಲ್ಲಾ ವಿಭಾಗದ ಕಾರ್ಯ ಮತ್ತು ಪಾಲನೆ ಕಾರ್ಯ ನಿರ್ವಾಹಕ ಇಂಜಿನಿಯರ್(ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





