Mysore
16
clear sky

Social Media

ಗುರುವಾರ, 29 ಜನವರಿ 2026
Light
Dark

ಮೈಸೂರು | ಸುಗಮವಾಗಿ ನಡೆದ ಕೆ-ಸೆಟ್‌ ಪರೀಕ್ಷೆ

ಮೈಸೂರು : ಸಹಾಯಕ ಪ್ರಾಧ್ಯಾಪಕ ಅರ್ಹತಾ ಪರೀಕ್ಷೆ(ಕೆ-ಸೆಟ್)‌ ನಗರದ ವಿವಿಧ ಕೇಂದ್ರಗಳಲ್ಲಿ ಭಾನುವಾರ ಸುಗಮವಾಗಿ ನಡೆಯಿತು.

ಕೆ-ಸೆಟ್ ಪರೀಕ್ಷೆಗೆ 18674 ಮಂದಿ ಅಭ್ಯರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಆದರೆ, ಭಾನುವಾರ ನಡೆದ ಪರೀಕ್ಷೆಯಲ್ಲಿ 17038 ಮಂದಿ ಹಾಜರಾಗಿದ್ದು, 1636 ಮಂದಿ ಅಭ್ಯರ್ಥಿಗಳು ಗೈರಾಗಿದ್ದರು.

ಡಿ.ಬನುಮಯ್ಯ ಪದವಿ ಪೂರ್ವ ಕಾಲೇಜು, ಮಹಾರಾಣಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು, ಮಹಾರಾಣಿ ವಿಜ್ಞಾನ ಪದವಿ ಕಾಲೇಜು, ಮಹಾರಾಜ ಸರ್ಕಾರಿ ಕಾಲೇಜು, ದೇವರಾಜ ಬಾಲಕಿಯರ ಕಾಲೇಜು, ಮರಿಮಲ್ಲಪ್ಪ ಪದವಿ ಕಾಲೇಜು, ಸರ್ಕಾರಿ ಆದರ್ಶ ವಿದ್ಯಾಲಯ, ವಿದ್ಯಾವರ್ಧಕ ಪದವಿ ಪೂರ್ವ ಕಾಲೇಜು,ಮಹಾಜನ ಕಾಲೇಜು ಸೇರಿದಂತೆ 41 ಪರೀಕ್ಷಾ ಕೇಂದ್ರಗಳಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1ಗಂಟೆಯ ತನಕ ನಡೆಯಿತು. ಪರೀಕ್ಷಾ ಕೇಂದ್ರದ ಸುತ್ತಲೂ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಪರೀಕ್ಷಾ ಕೇಂದ್ರದ ಒಳಗೆ ಅಭ್ಯರ್ಥಿಗಳನ್ನು ಹೊರತುಪಡಿಸಿ ಉಳಿದವರಿಗೆ ಅವಕಾಶ ನೀಡಿರಲಿಲ್ಲ.

ವಿವಿಧ ಕೇಂದ್ರಗಳಿಗೆ ಭೇಟಿ
ಅಪರ ಜಿಲ್ಲಾಧಿಕಾರಿ ಡಾ.ಪಿ.ಶಿವರಾಜು ಅವರು ವಿವಿಧ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ನೋಡೆಲ್ ಅಧಿಕಾರಿಗಳೂ ಆಗಿರುವ ಎಡಿಸಿ, ಮಹಾರಾಜ ಪಿಯು ಕಾಲೇಜು,ಮರಿಮಲ್ಲಪ್ಪ ಕಾಲೇಜು,ಸೆಂಟ್ ಫಿಲೋಮಿನಾ ಕಾಲೇಜು ಕೇಂದ್ರಗಳಿಗೆ ತೆರಳಿ ಪರಿಶೀಲಿಸಿ ಮೇಲ್ವಿಚಾರಕರಿಂದ ಮಾಹಿತಿ ಪಡೆದರು.

Tags:
error: Content is protected !!