Mysore
18
scattered clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ಮೈಸೂರು| ಸರ್ಕಾರಿ ಶಾಲೆಯ ಮಕ್ಕಳಿಂದ ಶೌಚಾಲಯ ಸ್ವಚ್ಛತೆ: ಪೋಷಕರ ದೂರು

ಮೈಸೂರು: ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರು ವಿದ್ಯಾರ್ಥಿಗಳಿಂದ ಶಾಲೆಯ ಸಂಪಿನಿಂದ ನೀರನ್ನು ಎತ್ತಿಸಿ, ಶೌಚಾಲಯಗಳನ್ನು ಸ್ವಚ್ಛಗೊಳಿಸಿರುವ ಘಟನೆ ನಡೆದಿದೆ.

ಈ ಘಟನೆ ಕೆಲವು ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ವರುಣ ವಿಧಾನಸಭಾ ಕ್ಷೇತ್ರದ ಬಿಳಗೆರೆ ಹುಂಡಿ ಗ್ರಾಮದಲ್ಲಿ ನಡೆದಿದೆ. ನವೆಂಬರ್.20 ರಂದು ಗ್ರಾಮಸ್ಥನಾದ ಸಿದ್ದರಾಜು ಅವರು ತಮ್ಮ ಮಗಳನ್ನು ಆಂಗನವಾಡಿಯಿಂದ ಕರೆತರಲು ಬಂದಾಗ ಶಾಲೆಯ ಮಕ್ಕಳು ಸಂಪಿನಿಂದ ನೀರೆತ್ತುತ್ತಿರುವ ದೃಶ್ಯ ಕಂಡು ಬಂದಿದೆ.

ನಾನು ಶಾಲಾ ಆವರಣದಲ್ಲಿರುವ ಸಂಪಿನಿಂದ ಮಕ್ಕಳು ನೀರು ಎಳೆಯುತ್ತಿರುವುದನ್ನು ಕಂಡೆ. ಮೊದಲಿಗೆ ಯಾರಾದರೂ ಒಳಗೆ ಬಿದ್ದಿರಬಹುದೆಂದು ಭಾವಿಸಿದೆ. ವಿಚಾರಿಸಿದಾಗ, ಶಿಕ್ಷಕರು ಶೌಚಾಲಯಗಳನ್ನು ಸ್ವಚ್ಛಗೊಳಿಸಲು ನೀರು ತರುವಂತೆ ಹೇಳಿದ್ದಾಗಿ ಮಕ್ಕಳು ಹೇಳಿದರು. ನಾನು ಈ ಘಟನೆಯನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿ ಬ್ಲಾಕ್ ಎಜ್ಯುಕೇಶನ್ ಆಫೀಸರ್ (BEO) ಅವರಿಗೆ ದೂರು ನೀಡಿದೆ. BEO ಅವರ ನಿರ್ದೇಶನದಂತೆ ನಂತರ ಲಿಖಿತ ದೂರನ್ನು ಕೂಡ ಸಲ್ಲಿಸಿದೆ. ವಿಡಿಯೋ ಮತ್ತು ದೂರು ಎರಡನ್ನೂ ಡಿಡಿಪಿಐಗೆ ಕಳುಹಿಸಲಾಗುವುದು ಎಂದು ಅವರು ಭರವಸೆ ನೀಡಿದರು ಎಂದು ಸಿದ್ದರಾಜು ಹೇಳಿದರು.

Tags:
error: Content is protected !!