Mysore
25
haze

Social Media

ಶನಿವಾರ, 06 ಡಿಸೆಂಬರ್ 2025
Light
Dark

ಮೈಸೂರು | ವೆಶ್ಯವಾಟಿಕೆಗೆ ಬಲಿಯಾಗುತ್ತಿದ್ದ ಬಾಲಕಿ ರಕ್ಷಣೆ; ಅಪ್ರಾಪ್ತೆ ಜೊತೆ ಲೈಂಗಿಕ ಸಂಪರ್ಕಕ್ಕೆ 20 ಲಕ್ಷ ಡಿಮ್ಯಾಂಡ್‌

ಅಪ್ರಾಪ್ತ ಬಾಲಕಿ ಜೊತೆ ಮೊದಲ ಲೈಂಗಿಕ ಸಂಪರ್ಕಕ್ಕೆ 20 ಲಕ್ಷ ಡಿಮ್ಯಾಂಡ್…ಬಾಲಕಿ ರಕ್ಷಣೆ…ವಿಜಯನಗರ ಪೊಲೀಸರು ಹಾಗೂ ಒಡನಾಡಿ ಸಂಸ್ಥೆ ಜಂಟಿ ಕಾರ್ಯಾಚರಣೆ…ಓರ್ವ ಮಹಿಳೆ ಹಾಗೂ ವ್ಯಕ್ತಿ ಅಂದರ್…

ಮೈಸೂರು : ಋತುಮತಿಯಾದ ಅಪ್ರಾಪ್ತ ಬಾಲಕಿ ಜೊತೆ ಮೊದಲ ಲೈಂಗಿಕ ಸಂಪರ್ಕ ಬೆಳೆಸಲು 20 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ ಮಹಿಳೆ ಹಾಗೂ ಓರ್ವ ಪುರುಷನನ್ನ ಬಂಧಿಸುವಲ್ಲಿ ವಿಜಯನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಸದ್ಯ ಬಾಲಕಿಯನ್ನು ರಕ್ಷಿಸಿರುವ ಪೊಲೀಸರು ಬೆಂಗಳೂರಿನ ನಿವಾಸಿ ಶೋಭಾ ಹಾಗೂ ಈಕೆಯ ಜೊತೆಗಿದ್ದ ತುಳಸಿಕುಮಾರ್ ಎಂಬುವರನ್ನ ಬಂದಿಸಿದ್ದಾರೆ.

ಒಡನಾಡಿ ಸೇವಾ ಸಂಸ್ಥೆ ಹಾಗೂ ಮಕ್ಕಳ ಕಲ್ಯಾಣ ಸಮಿತಿ ಹಾಗೂ ವಿಜಯನಗರ ಠಾಣೆ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆ ಯಶಸ್ವಿಯಾಗಿದೆ. ಋತುಮತಿಯಾದ ಬಾಲಕಿಯರನ್ನ ವೇಶ್ಯಾವಟಿಕೆಗೆ ಇಳಿಸುವ ರಾಕೆಟ್ ಭೇದಿಸುವಲ್ಲಿ ಒಡನಾಡಿ ಸಂಸ್ಥೆ ಹಾಗೂ ವಿಜಯನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಇದನ್ನೂ ಓದಿ:-ಬಿಗ್‌ಬಾಸ್‌ ಕನ್ನಡ 12ರ ಗ್ರ್ಯಾಂಡ್‌ ಓಪನಿಂಗ್‌ : ಸ್ಟೈಲಿಶ್‌ ಲುಕ್‌ನಲ್ಲಿ ಎಂಟ್ರಿ ಕೊಟ್ಟ ಕಿಚ್ಚ

ಋತುಮತಿಯಾದ ಬಾಲಕಿಯರ ಜೊತೆ ಮೊದಲ ಲೈಂಗಿಕ ಸಂಪರ್ಕ ಬೆಳೆಸಿದರೆ ಹಲವು ಮಾನಸಿಕ ಖಾಯಿಲೆಗಳು ಗುಣವಾಗುತ್ತದೆ ಎಂಬ ಮೂಢ ನಂಬಿಕೆ ಈ ದಂಧೆಗೆ ಸಹಕಾರಿಯಾಗಿದೆ ಎನ್ನುವುದು ವಿಷಾಧನೀಯ. ಇಂತಹ ಸಮಸ್ಯೆ ಎದುರಿಸುತ್ತಿರುವ ಪುರುಷರನ್ನ ಪತ್ತೆ ಹಚ್ಚಿ ಋತುಮತಿಯಾದ ಬಾಲಕಿಯರನ್ನ ಸರಬರಾಜು ಮಾಡುವ ದೊಡ್ಡ ರಾಕೆಟ್ ಇರುವುದು ಸಹ ಬೆಳಕಿಗೆ ಬಂದಿದೆ. ಇಂತಹ ಸಮಸ್ಯೆ ಇರುವ ಪುರುಷರ ಸಂಪರ್ಕ ಪಡೆಯಲು ಶೋಭಾ ಎನ್ನುವ ಮಹಿಳೆ ಪ್ರಯತ್ನಿಸುತ್ತಿರುವುದು ಒಡನಾಡಿ ಸಂಸ್ಥೆಗೆ ಮಾಹಿತಿ ಬಂದಿದೆ. 12-13 ವರ್ಷದ ಬಾಲಕಿಯನ್ನ ವಾಟ್ಸಾಪ್ ವಿಡಿಯೋ ಮೂಲಕ ಕೆಲವು ಗಿರಾಕಿಗಳಿಗೆ ತೋರಿಸಿ ಹಣಕ್ಕೆ ಬೇಡಿಕೆ ಇಟ್ಟಿರುವ ಮಾಹಿತಿ ಒಡನಾಡಿ ಸಂಸ್ಥೆಯ ಸ್ಟ್ರಿಂಜರ್ ಗಳಿಗೆ ತಲುಪಿದೆ.

ಕೂಡಲೇ ಕಾರ್ಯೋನ್ಮುಖರಾದ ಒಡನಾಡಿ ಸಂಸ್ಥೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿ ರಹಸ್ಯವಾಗಿ ಟ್ರಾಪ್ ಮಾಡಿ ಬಾಲಕಿಯನ್ನ ರಕ್ಷಿಸಲು ಮುಂದಾಗಿದ್ದಾರೆ. ಇವರ ಕಾರ್ಯಾಚರಣೆಗೆ ಮಕ್ಕಳ ಕಲ್ಯಾಣ ಸಮಿತಿ ಸಹ ಕೈ ಜೋಡಿಸಿದೆ. ಸ್ಟ್ರಿಂಜರ್ ಮೂಲಕ ಮಹಿಳೆಯ ನಂಬಿಕೆ ಗಳಿಸಿದ್ದಾರೆ. ಮಹಿಳೆ ಬಾಲಕಿಯನ್ನ ಮೈಸೂರಿಗೆ ಕರೆತರಲು ಒಪ್ಪಿಗೆ ನೀಡಿದ್ದಾಳೆ. ಮಾತುಕತೆಯಂತೆ ನಿನ್ನೆ ಮಧ್ಯಾಹ್ನ 2 ಗಂಟೆ ವೇಳೆಗೆ ಮಹಿಳೆ ಬಾಲಕಿ ಜೊತೆ ಬರುವುದಾಗಿ ಮಾತು ಕೊಟ್ಟಿದ್ದಾಳೆ.

ಒಡನಾಡಿ ಸಂಸ್ಥೆಯ ಮುಖ್ಯಸ್ಥರು ಹಾಗೂ ಕಾರ್ಯಕರ್ತರು ಮತ್ತು ವಿಜಯನಗರ ಠಾಣೆ ಪೊಲೀಸರು ಮತ್ತು ಸಿಬ್ಬಂದಿಗಳು ಮಹಿಳೆಯನ್ನ ರೆಡ್ ಹ್ಯಾಂಡಾಗಿ ಹಿಡಿಯಲು ಸ್ಕೆಚ್ ಹಾಕಿ, ವಿಜಯನಗರ 4 ನೇ ಹಂತದಲ್ಲಿರುವ ಸರ್ಕಾರಿ ಬಾಲಕಿಯರ ಬಾಲ ಮಂದಿರದ ಬಳಿ ಬರುವಂತೆ ತಿಳಿಸಿದ್ದಾರೆ.‌ ಓರ್ವ ವ್ಯಕ್ತಿ ಜೊತೆ ಮಹಿಳೆ ಬಾಲಕಿಯನ್ನ ಕರೆತಂದಿದ್ದಾಳೆ. ಜೊತೆ ಬಂದ ವ್ಯಕ್ತಿ ಸ್ವಲ್ಪ ದೂರದಲ್ಲಿ ನಿಂತು ಎಚ್ಚರಿಕೆಯಿಂದ ಗಮನಿಸಿದ್ದಾನೆ. ಮೊದಲೇ ನಿಗದಿ ಪಡಿಸಿದ್ದ ವ್ಯಕ್ತಿ ಕಾರಿನಿಂದ ಬಂದು ಮಹಿಳೆ ಜೊತೆ ಮಾತನಾಡಿದ್ದಾರೆ. ಮಹಿಳೆ ಮೊದಲ ಲೈಂಗಿಕ ಸಂಪರ್ಕಕ್ಕಾಗಿ 20 ಲಕ್ಷ ಡಿಮ್ಯಾಂಡ್ ಮಾಡುತ್ತಿದ್ದ ವೇಳೆ ಪೊಲೀಸರು ಸುತ್ತುವರೆದಿದ್ದಾರೆ. ಈ ವೇಳೆ ಮಹಿಳೆ ಬಾಲಕಿಯನ್ನ ತನ್ನ ಮಗಳು ಎಂದಿದ್ದಾಳೆ, ನಂತರ ಅಣ್ಣನ ಮಗಳು ಎಂದಿದ್ದಾಳೆ, ಬಳಿಕ ದತ್ತು ಮಗಳು ಎಂದು ಹೇಳಿ ಕೊನೆಗೆ ತಾನು ವೇಶ್ಯಾವಟಿಕೆ ದಂಧೆಯಲ್ಲಿರುವುದಾಗಿ ಒಪ್ಪಿಕೊಂಡಿದ್ದಾಳೆ. ಇದೇ ವೇಳೆ ಜೊತೆ ಬಂದಿದ್ದ ವ್ಯಕ್ತಿಯೂ ತಾನು ಆಕೆಯ ಪತಿ ಎಂದು ಹೇಳಿದ್ದಾನೆ. ಕೂಡಲೇ ಕಾರ್ಯೋನ್ಮುಖರಾದ ಪೊಲೀಸರು ಬಾಲಕಿಯನ್ನ ತಮ್ಮ ವಶಕ್ಕೆ ಪಡೆದು ಮಹಿಳೆ ಶೋಭಾ ಹಾಗೂ ವ್ಯಕ್ತಿ ತುಳಸಿಕುಮಾರ್ ರನ್ನ ವಶಕ್ಕೆ ಪಡೆದಿದ್ದಾರೆ. ಸದ್ಯ ರಕ್ಷಣೆಗೆ ಒಳಗಾದ ಬಾಲಕಿಯನ್ನ ಬಾಲ‌ಮಂದಿರದ ವಶಕ್ಕೆ ನೀಡಲಾಗಿದೆ. ಬಾಲಕಿ 6 ನೇ ತರಗತಿ ಓದುತ್ತಿರುವ ಬಗ್ಗೆ ಮಾಹಿತಿ ಬಂದಿದೆ.

ಮಹಿಳೆಗೆ ಬಾಲಕಿ ದೊರೆತ ಬಗ್ಗೆ ಪೊಲೀಸರು ಮತ್ತಷ್ಟು ಮಾಹಿತಿ ಕಲೆ ಹಾಕಬೇಕಿದೆ. ಸದ್ಯ ಶೋಭಾ ಹಾಗೂ ತುಳಸಿಕುಮಾರ್ ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ವಿಜಯನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತೆನಿಖೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Tags:
error: Content is protected !!