ಮೈಸೂರು: ರೈತರು ಎಂದಾಕ್ಷಣ ಆಗಿನ ಕಾಲದಿಂದಲೂ ಒಂದೇ ಬೆಳೆ ಬೆಳೆದು ಅದರ ಲಾಭ ನಷ್ಟಗಳನ್ನು ನೋಡುತ್ತಾ ಬರುತ್ತಾ ಇರುವುದು ಸಾಮಾನ್ಯ. ಆದರೆ ಮೈಸೂರು ಜಿಲ್ಲೆಯ ಓರ್ವ ನಿವಾಸಿಯು ಆಸ್ಟ್ರೇಲಿಯದ ಪರ್ಷಿಯ ಸೀಡ್‌ಲೆಸ್ ನಿಂಬೆ ಬೆಳೆದು ಇತರ ರೈತರಿಗೆ ಮಾದರಿಯಾಗಿದ್ದಾರೆ.
ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕಿನ ಪಡವ ಕೋಟೆ ಗ್ರಾಮದಲ್ಲಿ ಆಂಧ್ರಪ್ರದೇಶದಿಂದ ಬಂದ ರಾಮಕೃಷ್ಣ ಎಂಬ ವ್ಯಕ್ತಿಯು ಕಳೆದ 24 ವರ್ಷಗಳ ಹಿಂದೆ 40 ಎಕರೆ ಜಮೀನನ್ನು ಒಂದೇ ಸ್ಥಳದಲ್ಲಿ ಖರೀದಿ ಮಾಡಿದ್ದರು. ಇಲ್ಲಿಗೆ ಆಸ್ಟ್ರೇಲಿಯಾದಿಂದ ನಿಂಬೆ ಗಿಡವನ್ನು ತಂದು ಅಪಾರ ಆದಾಯ ಗಳಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ಬಿಎಸ್‌ಸ್ಸಿ ಗೋಲ್ಡ್ ಮೆಡಲಿಸ್ಟ್ ಆಗಿರುವ ರಾಮಕೃಷ್ಣ ಅವರು, ಆರ್ಟಿಕಲ್ಚರ್ ಡಿಪಾರ್ಟ್ಮೆಂಟ್ ಅಲ್ಲಿ ಆರ್ಟಿಕಲ್ಚರ್ ಆಫೀಸರ್ ಹಾಗೂ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ನಂತರ ಇವರಿಗೆ ಕೃಷಿಯ ಮೇಲೆ ಆಸಕ್ತಿ ಹೊಂದಿ ಮೈಸೂರಿನ ವಾತಾವರಣವನ್ನು ಇಷ್ಟಪಟ್ಟು ಮೈಸೂರು ಜಿಲ್ಲೆ ಎಚ್ ಡಿ ಕೋಟೆ ತಾಲೂಕಿನ ಪಡವಕೋಟೆ ಗ್ರಾಮದಲ್ಲಿ 40 ಎಕರೆ ಜಮೀನು ಖರೀದಿ ಮಾಡುತ್ತಾರೆ. ನಂತರ ಎಂಎಸ್ಸಿ ಆರ್ಟಿಕಲ್ಚರ್ ಸಂಬಂಧಪಟ್ಟಂತೆ ಆಸ್ಟ್ರೇಲಿಯಾದಲ್ಲಿ ಸಹ ಅಭ್ಯಾಸವನ್ನು ಸಹ ಮಾಡುತ್ತಾ, ಅಲ್ಲಿಯ ತಳಿಯಾದ ಪರ್ಷಿಯ ಸೀಡ್ ಲೆಸ್ ನಿಂಬೆ ತಳಿಯನ್ನು ಆಸ್ಟ್ರೇಲಿಯಾ ಮೂಲಕ ಭಾರತಕ್ಕೆ ಗಿಡಗಳನ್ನು ಭಾರತಕ್ಕೆ ತಂದು ಜಮೀನಿಗೆ ಹಾಕುತ್ತಾರೆ.
ಈ ತಿಳಿಯ ವಿಶೇಷವೆಂದರೆ ಇದು 365 ದಿನಗಳ ಕಾಲ ಸಹ ನಿಂಬೆಹಣ್ಣನ್ನು ಬಿಡುತ್ತದೆ. ಆದ್ದರಿಂದ ಇವರು ಸುಮಾರು ಏಳು ಸಾವಿರಕ್ಕೂ ಹೆಚ್ಚು ಗಿಡಗಳನ್ನು ತೋಟದಲ್ಲಿ ಹಾಕಿದ್ದಾರೆ. ಈ ನಿಂಬೆಹಣ್ಣಿ ಬೆಲೆ ಒಂದು ಕೆಜಿ ಸುಮಾರು 70 ರಿಂದ 150 ರೂಪಾಯಿವರೆಗೂ ಮಾರಾಟವಾಗುತ್ತದೆ. ಈ ಗಿಡ ನೆಟ್ಟ ಒಂದು ವರ್ಷಕ್ಕೆ ಫಲ ನೀಡಲು ಪ್ರಾರಂಭವಾಗುತ್ತದೆ. ಒಂದು ಎಕರೆಗೆ ಖರ್ಚು ಕಳೆದು 5 ರಿಂದ 6 ಲಕ್ಷಕ್ಕೂ ಹೆಚ್ಚಿನ ಆದಾಯ ಸಿಗಲಿದೆ.
ಇನ್ನು ವಿಶೇಷವೆಂದರೆ ಈ ನಿಂಬೆಯಲ್ಲಿ ಬೀಜ ಇರುವುದಿಲ್ಲ. ನಮ್ಮಲ್ಲಿ ಬೆಳೆಯುವ ನಿಂಬೆ ಹಣ್ಣಿನ ರಸಕ್ಕಿಂತ ಮೂರು ಪಟ್ಟು ಹೆಚ್ಚು ರಸ ಇರುತ್ತದೆ ಹಾಗೂ ಕಹಿ ಅಂಶ ತುಂಬಾ ಕಡಿಮೆ ಇರುತ್ತದೆ.
ಇನ್ನು ರಾಮಕೃಷ್ಣ ಅವರು ನಿಂಬೆಹಣ್ಣಿನಲ್ಲಿ ಹೆಚ್ಚಿನ ಇಳುವರಿ ಪಡೆಯಲು ಅವರು ತಯಾರಿಸಿಕೊಳ್ಳುವ ಜೀವಾಮೃತವೇ ಕಾರಣ ಎನ್ನಲಾಗುತ್ತಿದೆ. ಜೀವಾಮೃತದಿಂದಲೇ ಅತೀ ಹೆಚ್ಚು ಇಳುವರಿ ಪಡೆಯುತ್ತಿದ್ದು, ಈ ಬಗ್ಗೆ ಇತರ ರೈತರಿಗೂ ಮಾಹಿತಿ ನೀಡುತ್ತಿದ್ದಾರೆ.





