Mysore
19
overcast clouds

Social Media

ಮಂಗಳವಾರ, 09 ಡಿಸೆಂಬರ್ 2025
Light
Dark

ಮೈಸೂರು | ಸಿಎಂ ತವರಲ್ಲಿ ನಿಲ್ಲದ ಫೈನಾನ್ಸ್‌ ಹಾವಳಿ ; ರೈತನ ಮನೆ ಜಪ್ತಿ

ಮೈಸೂರು : ಸಿಎಂ ಸಿದ್ದರಾಮಯ್ಯ ತವರಲ್ಲಿ ಮತ್ತೆ ಮೈಕ್ರೋ ಫೈನಾನ್ಸ್ ಹಾವಳಿ ಮರುಕಳಿಸಿದ್ದು, ಸಾಲ ಮರು ಪಾವತಿಸದ ರೈತನ ಮನೆಯನ್ನ ಜಪ್ತಿ ಮಾಡಿರುವ ಘಟನೆ ನಡೆದಿದೆ.

ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಕಂದೇಗಾಲ‌ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಸಾಲದ ಕಂತು ಕಟ್ಟಿಲ್ಲ ಎಂದು ರೈತ ಚಿನ್ನಸ್ವಾಮಿ ಅವರ ಮನೆಯನ್ನ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಜಪ್ತಿ ಮಾಡಿದ್ದಾರೆ.

ಇದನ್ನು ಓದಿ: ಮೈಕ್ರೋ ಫೈನಾನ್ಸ್‌ ಸಿಬ್ಬಂದಿ ಅಡ್ಡಗಟ್ಟಿ ದರೋಡೆ : 25 ಸಾವಿರು ದೋಚಿ ಪರಾರಿ

ಕಾಲವಕಾಶ ಕೋರಿದ್ದರೂ ಸ್ಪಂದಿಸದ ಫೈನಾನ್ಸ್ ನ್ಯಾಯಾಲಯದ ಆದೇಶ ತಂದು ಮನೆಯನ್ನ ಜಪ್ತಿ ಮಾಡಿದ್ದಾರೆ. ಚಿನ್ನಸ್ವಾಮಿ ಕುಟುಂಬ ಮನೆ ನಿರ್ಮಾಣಕ್ಕೆ ಇಕ್ವೀಟಾಸ್ ಸ್ಮಾಲ್ ಫೈನಾನ್ಸ್ ನಲ್ಲಿ 2.70 ಲಕ್ಷ ಸಾಲ ಪಡೆದಿತ್ತು. ಈಗಾಗಲೆ 19 ಕಂತುಗಳ 1,89,000 ಸಾಲ‌ ಮರು ಪಾವತಿಸಿದ್ದು, ಚಿನ್ನಸ್ವಾಮಿ ಪತ್ನಿ ಸಹ ಇಕ್ವೀಟಾಸ್ ಫೈನಾನ್ಸ್ ನಲ್ಲಿ ಗುಂಪು ಸಾಲ ಪಡೆದಿದ್ದರು.

ಆದರೆ ಮನೆ ಸಾಲವನ್ನ ಗುಂಪು ಸಾಲಕ್ಕೆ ವಜಾ ಮಾಡಿಕೊಂಡಿದ್ದಾರೆಂದು ಕುಟುಂಬದವರು ಆರೋಪ ಮಾಡಿದ್ದು ಈ ಕುರಿತು ಸಾಲ ಮರುಪಾವತಿಗೆ ಕಾಲಾವಕಾಶಕ್ಕಾಗಿ ತಹಸೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಕಾಲಾವಕಾಶ ಕೋರಿದರೂ ಮನೆ ಜಪ್ತಿ ಮಾಡಿದ್ದಾರೆಂದು ಚಿನ್ನಸ್ವಾಮಿ ಕುಟುಂಬ ಅಳಲು ತೋಡಿಕೊಂಡಿದ್ದಾರೆ.

Tags:
error: Content is protected !!