Mysore
21
overcast clouds

Social Media

ಬುಧವಾರ, 09 ಜುಲೈ 2025
Light
Dark

ಅರುಣ್‌ ಯೋಗಿರಾಜ್‌ಗೆ ಗೌರವ ಡಾಕ್ಟರೇಟ್‌ ಪ್ರಧಾನ

ಉತ್ತರ ಪ್ರದೇಶ: ಮೈಸೂರಿನ ಖ್ಯಾತ ಶಿಲ್ಪಿ, ಬಾಲರಾಮ ನಿರ್ಮಾತೃ ಅರುಣ್‌ ಯೋಗಿರಾಜ್‌ ಅವರಿಗೆ ಉತ್ತರ ಪ್ರದೇಶದ ಸಂಸ್ಕೃತಿ ವಿಶ್ವ ವಿದ್ಯಾನಿಲಯ ಗೌರವ ಡಾಕ್ಟರೇಟ್‌ ಪ್ರಧಾನ ಮಾಡಲಾಗಿದೆ.

ಮಾಜಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರು ಅರುಣ್‌ ಯೋಗಿರಾಜ್‌ ಅವರಿಗೆ ಡಾಕ್ಟರ್‌ ಆಫ್‌ ಫಿಲಾಸಪಿ (ಡಿ. ಫಿಲ್‌) ಪ್ರಧಾನ ಮಾಡಿ ಗೌರವಿಸಿದರು.

ಅರುಣ್‌ ಯೋಗಿರಾಜ್‌ ಅವರ ಕಲೆ, ವಾಸ್ತುಶಿಲ್ಪಕಲೆಗೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಗೌರವ ಡಾಕ್ಟರೇಟ್‌ ನೀಡಿ ಗೌರವಿಸಲಾಗಿದೆ.

2008ರಿಂದ ಶಿಲ್ಪಕಲೆಗೆ ತಮ್ಮನ್ನು ತಾವು ತೊಡಗಿಸಿಕೊಂಡ ಅರುಣ್‌, ನೇತಾಜಿ ಸುಭಾಷ್‌ ಚಂದ್ರಬೋಸ್‌ ಅವರ 125ನೇ ಜನ್ಮ ದಿನಾಚರಣೆ ವಿಶೇಷ ಮೂರ್ತಿ ಕೆತ್ತನೆ ಮಾಡಿ, ಅಮರ್‌ ಜವಾನ್‌ ಜ್ಯೂತಿ ಇಂಭಾಗ ಇಂಡಿಯಾ ಗೇಟ್‌ನಲ್ಲಿ ಮೂರ್ತಿ ಪ್ರತಿಷ್ಠಾಪಿಸಲಾಯಿತು. ಇದರ ಜೊತೆಗೆ ರಾಮ ಮಂದಿರದಲ್ಲಿ ಪ್ರತಿಷ್ಠಾಪಿಸಲಾಗಿರುವ ಬಾಲರಾಮನ ಮೂರ್ತಿ, ಶಂಕರಾಚಾರ್ಯರ ಮೂರ್ತಿಯನ್ನು ಸಹಾ ಕೆತ್ತಿದ ಹಿರಿಮೆ ಅರುಣ್‌ ಯೋಗಿರಾಜ್‌ ಅವರಿಗಿದೆ.

Tags:
error: Content is protected !!