ಮೈಸೂರು : ನಗರದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮೈಸೂರಿನ ಅರಮನೆ ಮುಂಭಾಗದಲ್ಲಿರುವ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಬೃಹತ್ ಗಾತ್ರದ ಮರ ಧರೆಗುರುಳಿದ ಘಟನೆ ನಡೆದಿದೆ.
ಅರಮನೆ ಕಾಂಪೌಂಡ್‌ಗೆ ಹೊಂದಿಕೊಂಡಿರುವ ಕರ್ಜನ್ ಪಾರ್ಕ್ ಒಳಗಡೆ ಬೆಳೆಸಲಾಗಿದ್ದ ದೊಡ್ಡ ಮರ ಬಿದ್ದು ರಸ್ತೆ ಭಾಗದಲ್ಲಿ ನಿಂತಿದ್ದ ಎರಡು ಆಟೋಗಳು ಸಂಪೂರ್ಣ ಜಖಂಗೊಂಡಿವೆ.
ಇದನ್ನು ಓದಿ: ಮುಂದುವರೆದ ಮಳೆ : ಅಗತ್ಯ ಕ್ರಮಕ್ಕೆ ಜಿಲ್ಲಾಧಿಕಾರಿ ಸೂಚನೆ
ಘಟನೆ ಸಮಯದಲ್ಲಿ ಆಟೋಗಳಲ್ಲಿ ಇದ್ದ ಚಾಲಕರು ಸಲೀಂ ಮತ್ತು ಆಸಿಫ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮರ ಬಿದ್ದ ಪರಿಣಾಮ ಸ್ಥಳದಲ್ಲಿ ಕ್ಷಣಿಕವಾಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತ್ತು.
ಘಟನೆ ಕುರಿತು ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮರ ತೆರವಿಗೆ ಮೈಸೂರು ನಗರ ಪಾಲಿಕೆ ಸಿಬ್ಬಂದಿ ತಕ್ಷಣ ಕಾರ್ಯಾರಂಭ ಮಾಡಿದ್ದಾರೆ.





