Mysore
27
few clouds

Social Media

ಸೋಮವಾರ, 23 ಫೆಬ್ರವರಿ 2026
Light
Dark

ಮೈಸೂರು| ಚಿರತೆ ದಾಳಿಗೆ ಗಬ್ಬದ ಮೇಕೆ ಸಾವು

ಮೈಸೂರು: ಚಿರತೆ ದಾಳಿಗೆ ಗಬ್ಬದ ಮೇಕೆ ಸಾವನ್ನಪ್ಪಿರುವ ಘಟನೆ ಮೈಸೂರು ತಾಲ್ಲೂಕಿನ ಗುಂಗ್ರಾಲ್‌ ಛತ್ರ ಕೊಪ್ಪಲು ಗ್ರಾಮದಲ್ಲಿ ನಡೆದಿದೆ.

ನಾಗಣ್ಣ ಎಂಬುವವರಿಗೆ ಸೇರಿದ ಗಬ್ಬದ ಮೇಕೆಯೊಂದು ಚಿರತೆ ದಾಳಿಗೆ ಬಲಿಯಾಗಿದ್ದು, ಹೊಟ್ಟೆಯಲ್ಲಿದ್ದ ಎರಡು ಮರಿಗಳು ಕೂಡ ಸಾವನ್ನಪ್ಪಿವೆ.

ವಾರದ ಅಂತರದಲ್ಲಿ ಮೂರು ಮೇಕೆ, ಎರಡು ನಾಯಿಗಳನ್ನು ಚಿರತೆ ಬೇಟೆಯಾಡಿತ್ತು. ಈ ಭಾಗದಲ್ಲಿ ಆಗಿಂದ್ದಾಗ್ಗೆ ಚಿರತೆ ಕಾಣಿಸಿಕೊಳ್ಳುತ್ತಿತ್ತು.

ಚಿರತೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಜನತೆ ಭಯಭೀತರಾಗಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಿರತೆ ಸೆರೆಗೆ ಬೋನು ಇಟ್ಟಿದ್ದಾರೆ.

ಈಗಾಗಲೇ ಸ್ಥಳದಲ್ಲಿ ಗಸ್ತು ಹೆಚ್ಚಿಸಿ ಕಾರ್ಯಾಚರಣೆ ನಡೆಸಿದ್ದು, ರಾತ್ರಿ ವೇಳೆ ಬಹಳ ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದ್ದಾರೆ.

Tags:
error: Content is protected !!