Mysore
19
clear sky

Social Media

ಬುಧವಾರ, 17 ಡಿಸೆಂಬರ್ 2025
Light
Dark

ಮೈ-ಬೆಂ ಹೆದ್ದಾರಿ ಅಪಘಾತ | 2 ವರ್ಷದಲ್ಲಿ 1,674 ಅಪಘಾತ, 215ಮಂದಿ ಸಾವು

ಮಂಡ್ಯ : ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ-275 ರಲ್ಲಿ 2023ರಿಂದ 2025 ರವರೆಗೆ ಒಟ್ಟು 1,674 ಅಪಘಾತಗಳು ನಡೆದಿದ್ದು, 215 ಮಂದಿ ಜೀವ ಕಳೆದುಕೊಂಡಿದ್ದಾರೆ. 311 ಮಂದಿಗೆ ತೀವ್ರ ಗಾಯಗಳಾಗಿವೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮಾಹಿತಿ ನೀಡಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಸಂಗ್ರಹವಾಗುತ್ತಿರುವ ಟೋಲ್ ಶುಲ್ಕ ಕುರಿತು ವಿಧಾನಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಅವರು ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಕೇಳಿದ ಪ್ರಶ್ನೆಗೆ ಸಚಿವರು ಲಿಖಿತ ಉತ್ತರ ನೀಡಿದ್ದಾರೆ.

ಇದನ್ನೂ ಓದಿ:-ಮೈ-ಬೆಂ ಹೆದ್ದಾರಿ |ರೂ.855 ಕೋಟಿ ಟೋಲ್‌ ಸಂಗ್ರಹ

ಬೆಂಗಳೂರು-ನಿಡಘಟ್ಟ (ಪ್ಯಾಕೇಜ್ ೧) ನಡುವೆ 865 ಅಪಘಾತಗಳು ನಡೆದಿದ್ದು 76 ಮಂದಿ ಪ್ರಾಣ ಹಾನಿಯಾಗಿದೆ. 185 ಮಂದಿಗೆ ತೀವ್ರ ಗಾಯಗಳಾಗಿವೆ. ಹಾಗೇ, ನಿಡಘಟ್ಟ- ಮೈಸೂರು ( ಪ್ಯಾಕೇಜ್ ೨) 809 ಅಪಘಾತಗಳು ನಡೆದಿದ್ದು 139 ಮಂದಿ ಜೀವ ತೆತ್ತಿದ್ದಾರೆ. 126 ಮಂದಿಗೆ ತೀವ್ರ ಗಾಯಗಳಾಗಿವೆ. ಬೆಂಗಳೂರು-ನಿಡಘಟ್ಟ ನಡುವೆ ವರ್ಷದಿಂದ ವರ್ಷಕ್ಕೆ ಅಪಘಾತದಲ್ಲಿ ಇಳಿಕೆ ಆಗಿದ್ದು ಜೀವಹಾನಿ ಕಡಿಮೆ ಆಗಿದ್ದರೆ, ನಿಡಘಟ್ಟ-ಮೈಸೂರು ನಡುವೆ ಅಪಘಾತದಲ್ಲಿ ಹೆಚ್ಚಳವಾಗಿದ್ದು ಸಾವಿನಲ್ಲೂ ಏರಿಕೆ ಕಂಡುಬಂದಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿ ವೇಗದ ಮಿತಿಯನ್ನು ಪ್ರತಿ ಗಂಟೆಗೆ 120 ಕಿ.ಮೀ.ಗೆ ಇಳಿಸಿ, ವೇಗದ ಮೇಲೆ ನಿಗಾ ಇಡಲು ಅಲ್ಲಲ್ಲಿ ಕ್ಯಾಮೆರಾ ಅಳವಡಿಸಿ ಮಿತಿ ಮೀರಿದವರಿಂದ ದಂಡ ಸಂಗ್ರಹಿಸಲಾಗುತ್ತಿದೆ. ಆದಾಗ್ಯೂ, ಅಪಘಾತಗಳ ಸಂಖ್ಯೆಯಲ್ಲಿ ಇಳಿಮುಖ ಆಗದಿರುವುದನ್ನು ಗಮನಿಸಬಹುದಾಗಿದೆ.

ಹೆದ್ದಾರಿಯಲ್ಲಿ ವಾಹನಗಳ ಸಂಚಾರ, ಪ್ರಯಾಣಿಕರಿಗೆ ಸೌಲಭ್ಯ ಹಾಗೂ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು. ಹಾಗೇ, ಸರ್ವೀಸ್ ರಸ್ತೆಗಳಲ್ಲಿ ಬಾಕಿ ಉಳಿದಿರುವ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಮಧು ಜಿ.ಮಾದೇಗೌಡ ಅವರು ಸದನದ ಗಮನ ಸೆಳೆದಿದ್ದರು.

Tags:
error: Content is protected !!