ಪಿರಿಯಾಪಟ್ಟಣ : ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೊಹರಂ ಆಚರಣೆಯ ಅಂಗವಾಗಿ ಶಿಯಾ ಮುಸ್ಲಿಮರು ರಕ್ತ ಹರಿಸಿ ಭಕ್ತಿ ಸಮರ್ಪಿಸಿದರು.
ಮೊಹರಂ ಆಚರಣೆಯ ಹಿನ್ನೆಲೆಯಲ್ಲಿ ಮಸೀದಿಯಿಂದ ಮೆರವಣಿಗೆ ಹೊರಟ ಶಿಯಾ ಮುಸ್ಲಿಮರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಬಿಳಿಯ ಕುದುರೆ ಹಾಗೂ ದೇವರ ಮೂರ್ತಿಗಳನ್ನು ಹೊತ್ತು ಮೆರವಣಿಗೆ ನಡೆಸಿದರು.
ನಂತರ ಪ್ರಮುಖ ರಸ್ತೆ, ವೃತ್ತಗಳಲ್ಲಿ ಮೈಮೇಲೆ ಚಾಕು, ಮತ್ತಿತರ ಹರಿತ ಆಯುಧಗಳಿಂದ ತಮ್ಮನ್ನು ಹೊಡೆದುಕೊಳ್ಳುವ ಮೂಲಕ ರಕ್ತ ಹರಿಸಿ ಭಕ್ತಿ ಸಮರ್ಪಿಸಿದರು. ಹಲವಾರು ಹಿಂದುಗಳು ಕೂಡ ಮೆರವಣಿಗೆ ಬರುತ್ತಿದ್ದ ಮುಸ್ಲಿಂ ದೇವರಿಗೆ ಪೂಜೆ ಸಲ್ಲಿಸಿ ಪ್ರಸಾದ ಪಡೆದು, ನವಿಲುಗರಿಯ ಆಶೀರ್ವಾದ ಪಡೆದಿದ್ದು ವಿಶೇಷವಾಗಿತ್ತು.





