Mysore
16
clear sky

Social Media

ಗುರುವಾರ, 25 ಡಿಸೆಂಬರ್ 2025
Light
Dark

ಮುಡಾ ಮುತ್ತಿಗೆ ಯತ್ನ: ಆರ್.ಅಶೋಕ್‌ ಪೊಲೀಸ್‌ ವಶಕ್ಕೆ

ಮೈಸೂರು: ಮುಡಾ ಹಗರಣ ಖಂಡಿಸಿ ಮುಡಾ ಕಚೇರಿ ಮುತ್ತಿಗೆ ಹಾಕಲು ಬಂದ ನೂರಾರು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

ಗುರುವಾರ(ಜು.12) ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ನಗರಕ್ಕೆ ಬಂದ ವಿಪಕ್ಷ ನಾಯಕ ಆರ್.ಅಶೋಕ್‌, ಶಾಸಕ ಅಶ್ವತ್ಥನಾರಾಯಣ ಸೇರಿದಂತೆ ಹಲವಾರು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಮುಡಾ ಕಚೇರಿ ಹಿಂಭಾಗ ಪೊಲೀಸರು ವಶಕ್ಕೆ ಪಡೆದರು.

ನಗರ ಪೊಲೀಸ್‌ ಆಯುಕ್ತೆ ಸೀಮಾ ಲಾಟ್ಕರ್‌ ನೇತೃತ್ವದ ತಂಡವು ಮಳೆಯ ನಡುವೆಯೇ ಪ್ರತಿಭಟನಾಕಾರನ್ನು ವಶಕ್ಕೆ ಪಡೆಯಿತು.

ಸಂಸದ ಯದುವೀರ್‌, ಶಾಸಕ ಟಿ.ಎಸ್‌ ಶ್ರೀವತ್ಸ, ಬಿಜೆಪಿ ಜಿಲ್ಲಾ ನಗರ ಘಟಕ ಅಧ್ಯಕ್ಷ ಎಲ್.ನಾಗೇಂದ್ರ ಸೇರಿದಂತೆ ಹಲವರನ್ನು ವಶಕ್ಕೆ ಪಡೆದು ಬಸ್‌ನಲ್ಲಿ ಕರೆದೊಯ್ದರು.

Tags:
error: Content is protected !!