Mysore
20
overcast clouds
Light
Dark

ಸಂಸದ ಪ್ರಜ್ವಲ್‌ ನಿತ್ಯಾನಂದನ ದೇಶಕ್ಕೆ ಸೇರಲು ಪ್ರಯತ್ನಿಸುತ್ತಿದ್ದಾರೆ: ಲಕ್ಷ್ಮಣ್‌ ಆರೋಪ

ಮೈಸೂರು: ಅತ್ಯಾಚಾರ ಪ್ರಕರಣದಲ್ಲಿ ದೇಶ ಬಿಟ್ಟು ಹೋಗಿ ಮತ್ತೊಂದು ಹೊಸ ದೇಶವನ್ನು ಕಟ್ಟಿಕೊಂಡಿರುವ ನಿತ್ಯಾನಂದಸ್ವಾಮಿ ಇರುವ ಜಾಗಕ್ಕೆ ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಸೇರಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ಆರೋಪಿಸಿದ್ದಾರೆ.

ನಗರದಲ್ಲಿ ಶುಕ್ರವಾರ(ಮೇ.10) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಿತ್ಯಾನಂದ ಪ್ರಕರಣ ಏನಾಯಿತು ಎಂದು ಎಲ್ಲರಿಗೂ ತಿಳಿದಿದೆ. ನನಗಿರುವ ಮಾಹಿತಿ ಪ್ರಕಾರ ಹಾಸನ ಸಂಸದ ಪ್ರಜ್ವಲ್‌ ನಿತ್ಯಾನಂದಸ್ವಾಮಿ ಬಳಿ ಸೇರಲು ಪ್ರಯತ್ನಿಸುತ್ತಿದ್ದಾರೆ. ಆದರೆ ಜೆಡಿಎಸ್‌ ರಾಜ್ಯದಲ್ಲಿ ಪ್ರೆಸ್‌ಮೀಟ್‌ ಮತ್ತು ಪ್ರತಿಭಟನೆಗಳನ್ನು ಮಾಡಿ ಜನರ ದಿಕ್ಕು ತಪ್ಪಿಸುವ ಕಾರ್ಯ ಮಾಡುತ್ತಿದೆ ಎಂದು ನೇರವಾಗಿ ಆರೋಪ ಮಾಡಿದರು.

ಎರಡು ಬಾರಿ ಮುಖ್ಯಮಂತ್ರಿಯಾಗಿರುವ ಎಚ್‌.ಡಿ ಕುಮಾರಸ್ವಾಮಿಗೆ ಸಂತ್ರಸ್ತೆಯರ ಬಗ್ಗೆ ಕಾಳಜಿ ಇಲ್ಲ. ರಾಜ್ಯಪಾಲರಿಗೆ ಪ್ರಜ್ವಲ್‌ ಪ್ರಕರಣವನ್ನು ಸಿಬಿಐಗೆ ಕೊಡುವಂತೆ ಮನವಿ ಮಾಡಿದ್ದೀರಾ? ಅಮಿತ್‌ ಶಾ ನಿಮಗೇನಾದರೂ ಪ್ರಕರಣ ಮುಚ್ಚಿ ಹಾಕುವ ಭರವಸೆ ನೀಡಿದ್ದಾರಾ ಎಂದು ಪ್ರಶ್ನಿಸಿದರು.