Mysore
26
scattered clouds
Light
Dark

ಸಂಸದ ಪ್ರಜ್ವಲ್ ರೇವಣ್ಣ ಕೂಡಲೇ ತನಿಖಾಧಿಕಾರಿಗಳ ಮುಂದೆ ಶರಣಾಗಬೇಕು : ರೇಖಾ ಶ್ರೀನಿವಾಸ್

ಮೈಸೂರು: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಸಂಸದ ಪ್ರಜ್ವಲ್ ರೇವಣ್ಣ ಕೂಡಲೇ ತನಿಖಾಧಿಕಾರಿಗಳ ಮುಂದೆ ಶರಣಾಗುವಂತೆ ಮಹಿಳಾ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ರೇಖಾ ಶ್ರೀನಿವಾಸ್ ಆಗ್ರಹಿಸಿದ್ದಾರೆ.

ಪ್ರಜ್ವಲ್ ರೇವಣ್ಣ ಮಾಡಿರುವ ಈ ಕೃತ್ಯದಿಂದಾಗಿ ಇಡೀ ಕರ್ನಾಟಕದ ಜನತೆ ತಲೆತಗ್ಗಿಸುವಂತಾಗಿದೆ. ಅವರಿಗೆ ಮಾನಸಿಕ ಅಸ್ವಸ್ಥತೆ ಇರಬಹುದು. ಭೇಟಿ ಬಚಾವೋ ಯೋಜನೆ ಬರೀ ಡೋಂಗಿಯಾಗಿದ್ದು, ಪ್ರಜ್ವಲ್ ರೇವಣ್ಣನಂತಹ ಕಾಮುಕರನ್ನು ಸಂಸದರನ್ನಾಗಿ ಮಾಡಿದರೆ ಮುಂದೆ ದೇಶದ ಹೆಣ್ಣು ಮಕ್ಕಳ ಗತಿ ಏನು?.

ಒಂದಲ್ಲಾ, ಎರಡಲ್ಲಾ, ಹತ್ತಾರು ಹೆಣ್ಣು ಮಕ್ಕಳ ಜೀವನ ಹಾಳು ಮಾಡಿರುವ ಇಂಥ ವಿಕೃತಕಾಮಿಯ ವಿರುದ್ಧ ಬಿಜೆಪಿ ಏಕೆ ಮೌನ ವಹಿಸಿ ರಕ್ಷಣೆ ನೀಡುತ್ತಿದೆ ಎಂದು ಪ್ರಕಟಣೆಯಲ್ಲಿ ದೂರಿದ್ದಾರೆ.