Mysore
13
scattered clouds

Social Media

ಸೋಮವಾರ, 22 ಡಿಸೆಂಬರ್ 2025
Light
Dark

ಆಧುನಿಕ ಕಾಲಕ್ಕೆ ತಕ್ಕಂತೆ ಮನ್ರೇಗಾ ಹೆಸರು ಬದಲಾವಣೆ : ಸಂಸದ ಯದುವೀರ್‌

ಮೈಸೂರು : ಆಧುನಿಕ ಕಾಲಕ್ಕೆ ತಕ್ಕಂತೆ ಮನ್ರೇಗಾ ಹೆಸರನ್ನು ಕೇಂದ್ರ ಸರ್ಕಾರ ಬದಲಾಯಿಸಿದೆ. ಆದರೆ, ಕಾಂಗ್ರೆಸ್ ಮಾಡುತ್ತಿರುವ ಆರೋಪಕ್ಕೆ ಯಾವ ಬೆಲೆಯೂ ಇಲ್ಲ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.

ಕೇಂದ್ರ ಸರ್ಕಾರ ಮನರೇಗಾ ಹೆಸರು ಸೇರಿದಂತೆ, ನಾನಾ ನಿಯಮಗಳನ್ನು ಬದಲಿಸಿ ಮಸೂದೆ ಜಾರಿಗೊಳಿಸಿರುವ ಕುರಿತ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಪ್ರತಿ ವಾರವೂ ಸಹ ಕೂಲಿ ಕಾರ್ಮಿಕರಿಗೆ ಸಂಬಳ ಹೋಗಲಿದೆ. ಹಿಂದೆ ಕಾಮಗಾರಿ ಬಳಿಕ ಕೊಡುತ್ತಿದ್ದರು. ಈಗ ಅದು ಬದಲಾಗಿದೆ ಎಂದರು.

ಕೃಷಿ ಚಟುವಟಿಕೆ ಸಂದರ್ಭದಲ್ಲಿ ಮೈದಾನದ ಕೆಲಸ ಬಿಟ್ಟು ಹೋಗಬಹುದು. ಜತೆಗೆ ತಂತ್ರಜ್ಞಾನಕ್ಕೆ ಅನುಗುಣವಾಗಿ ಮಸೂದೆಯನ್ನು ಅನುಷ್ಠಾನ ಮಾಡಿದ್ದಾರೆ. ಇದರಿಂದ ಅನೂಕೂಲ ಆಗಲಿದೆ. ಕಾಂಗ್ರೆಸ್ ಮಾತಿಗೆ ಬೆಲೆ ಕೊಡುವ ಅಗತ್ಯವಿಲ್ಲ. ನಮ್ಮ ಕಾಲಕ್ಕೆ ಏನೂ ಮಾಡಬೇಕೋ ಅದನ್ನು ಮಾಡಿದ್ದೇವೆ. ಇದು ಹೊಸ ಯೋಜನೆ, ಹೊಸ ಭಾರತಕ್ಕೆ ಅನೂಕೂಲವಾಗುವ ಮಸೂದೆಯಾಗಿದೆ ಎಂದು ಹೇಳಿದರು.

ಎಲ್ಲಾ ಕೆಲಸದಲ್ಲಿಯೂ ಮಹಾತ್ಮ ಗಾಂಧಿ ಆದರ್ಶಗಳು ಇವೆ:
ಮಹಾತ್ಮ ಗಾಂಽ ಎಲ್ಲರ ಹೃದಯದಲ್ಲೂ ಸದಾ ಇರುವ ವ್ಯಕ್ತಿಯಾಗಿದ್ದಾರೆ. ಎಲ್ಲಾ ಕೆಲಸದಲ್ಲಿಯೂ ಅವರ ಆದರ್ಶಗಳು ಇವೆ ಎಂಬುದು ನಮ್ಮ ನಂಬಿಕೆಯಾಗಿದೆ. ಪಿಎಂ ಆವಾಸ್, ಜಲಜೀವವ್?ನಲ್ಲಿ ಅವರ ಆದರ್ಶಗಳಿವೆ. ಪಿಎಂ ಮುದ್ರಾ ಯೋಜನೆ ಸೇರಿ ಅನೇಕ ಯೋಜನೆಗಳಲ್ಲಿ ಅವರ ಆದರ್ಶಗಳಿವೆ. ವಿಕಸಿತ ಭಾರತದ ಗುರಿಯೇ ಗಾಂಽಯವರ ಆದರ್ಶದೊಂದಿಗೆ ನಡೆಯುತ್ತಿರುವುದಾಗಿದೆ ಎಂದರು.

ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಪ್ರತಿಕ್ರಿಯಿಸಿ, ಕೇಂದ್ರದಲ್ಲಿ ನಿರಂತರವಾಗಿ ನಮ್ಮ ಬೇಡಿಕೆಯಿದೆ. ವಿಕಸಿತ ಭಾರತದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ನಿರಂತರ ಅಭಿವೃದ್ಧಿ ಕಾರ್ಯ ನಡೆಯುತ್ತಿವೆ. ಅದರಲ್ಲೂ ಕುಶಾಲನಗರ ಹೆದ್ದಾರಿ ಮಾಡಲೂ ಏನೆಲ್ಲಾ ಅನುಮತಿ ಬೇಕೋ ಎಲ್ಲವನ್ನೂ ಮಾಡಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ:-ತಂತ್ರಜ್ಞಾನ ಅಳವಡಿಸಿಕೊಂಡು ಉತ್ತಮ ಇಳುವರಿ ಜೊತೆಗೆ ಹೆಚ್ಚಿನ ಆದಾಯ ಪಡೆಯರಿ : ರೈತರಿಗೆ ಸಿಎಂ ಕರೆ

ಮಾರ್ಚ್ ೨೦೨೭ರೊಳಗೆ ರಸ್ತೆ ಪೂರ್ಣಗೊಳಿಸಲಿದ್ದೇವೆ. ಒಂದೆರಡು ವಾರಗಳಲ್ಲಿ ಕೇಂದ್ರಕ್ಕೆ ಭೂಮಿ ಹಸ್ತಾಂತರ ಪ್ರಕ್ರಿಯೆಯೂ ಪೂರ್ಣಗೊಳ್ಳುವ ಮೂಲಕ ಮೈಸೂರು ವಿಮಾನ ನಿಲ್ದಾಣದ ವಿಸ್ತರಣೆ ಕಾರ್ಯ ಚುರುಕಾಗಲಿದೆ. ಭಾರತೀಯ ಭಾಷಾ ಸಂಸ್ಥಾನ (ಸಿಐಐಎಲ್ )ನಲ್ಲಿರುವ ಕನ್ನಡ ಶಾಸ್ತ್ರೀಯ ಭಾಷಾ ಸಂಸ್ಥಾನವನ್ನು ಪ್ರತ್ಯೇಕಗೊಳಿಸಿ ಅಭಿವೃದ್ಧಿ ಮಾಡುವ ಬಗ್ಗೆಯೂ ಕ್ರಮವಹಿಸಲಾಗಿದೆ ಎಂದರು.

ಮೈಸೂರಿನಲ್ಲಿಯೂ ಇಕೋ ಟೂರಿಸಂ ಜೋನ್ ಅಡಿ ಮೃಗಾಲಯದ ಸಮೀಪದ ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆ ತಂದಿದ್ದೇವೆ. ಟಾಂಗಾ ಮೂಲಕ ಮೈಸೂರನ್ನು ನೋಡುವುದು ಪ್ರವಾಸೋದ್ಯಮ ಅಭಿವೃದ್ಧಿಗೆ ಉತ್ತೇಜನ ನೀಡಲಿದೆ. ಹಳೆಯ ಜಿಲ್ಲಾಧಿಕಾರಿ ಕಚೇರಿಯನ್ನು ವಸ್ತು ಸಂಗ್ರಹಾಲಯ ಮಾಡುವುದಕ್ಕೂ ಮನವಿ ಮಾಡಲಾಗಿದೆ ಎಂದು ಹೇಳಿದರು.

Tags:
error: Content is protected !!