Mysore
26
broken clouds

Social Media

ಬುಧವಾರ, 30 ಏಪ್ರಿಲ 2025
Light
Dark

ಪರಿಷತ್‌ ಚುನಾವಣೆ: ಮತ ಎಣಿಕೆ ಆರಂಭ

ಮೈಸೂರು: ದಕ್ಷಿಣ ಶಿಕ್ಷಕರ ಕ್ಷೇತ್ರ, ನೈಋತ್ಯ ಶಿಕ್ಷಕರ ಕ್ಷೇತ್ರ ಮತ್ತು ನೈಋತ್ಯ ಪದವೀಧರ ಕ್ಷೇತ್ರಗಳಿಂದ ವಿಧಾನಪರಿಷತ್ತಿಗೆ ನಡೆದಿದ್ದ ಚುನಾವಣೆಯ ಮತಗಳ ಎಣಿಕೆ  ಆರಂಭವಾಗಿದೆ.

ಇಂದು(ಜೂ.೬) ಮಹಾರಾಣಿ ವಿಜ್ಞಾನ ಕಾಲೇಜಿನಲ್ಲಿ  ಪ್ರಾದೇಶಿಕ ಆಯುಕ್ತರಾದ ಡಾ ಜಿ.ಸಿ.ಪ್ರಕಾಶ್ ಹಾಗೂ ಚುನಾವಣೆ ವೀಕ್ಷಕರಾದ ಡಾ ರವಿಶಂಕರ್ .ಜೆ ಅವರ ಸಮ್ಮುಖದಲ್ಲಿ ಭದ್ರತಾ ಕೊಠಡಿ ತೆರಯಲಾಯಿತು.

ಬೆಳಿಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಿದೆ. ಪ್ರತಿ ಕ್ಷೇತ್ರಕ್ಕೂ 14 ಟೇಬಲ್ ಗಳು ಮತ್ತು ಒಂದು ಚುನಾವಣಾಧಿಕಾರಿ ಟೇಬಲ್ ಅಳವಡಿಸಲಾಗಿದ್ದು, ಪ್ರತಿ ಟೇಬಲ್ ಗೂ ಒಬ್ಬರು ಮೇಲ್ವಿಚಾರಕರು, ಇಬ್ಬರು ಸಹಾಯಕರು ಹಾಗೂ ಪ್ರತಿ ಟೇಬಲ್ ಗೂ ಒಬ್ಬರಂತೆ ಏಜೆಂಟರನ್ನು ನೇಮಕ ಮಾಡಲಾಗಿದೆ.

Tags: