ಮೈಸೂರು: ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಅವರನ್ನು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರಿಂದು ಭೇಟಿ ಮಾಡಿ ಆಶೀರ್ವಾದ ಪಡೆದುಕೊಂಡರು.
ಟಿಬೆಟಿಯನ್ 14ನೇ ಧರ್ಮಗುರು ದಲೈಲಾಮಾ ಅವರು ಜನವರಿ.5ರಂದು ಬೈಲುಕುಪ್ಪೆಗೆ ಆಗಮಿಸಿದ್ದು, ವಿಶ್ರಾಂತಿಯಲ್ಲಿದ್ದಾರೆ.
ಧರ್ಮಶಾಲಾದಲ್ಲಿ ಚಳಿಗಾಲವು ತುಂಬಾ ತೀವ್ರವಾಗಿರುತ್ತದೆ. ಹೀಗಾಗಿ ಒಂದು ತಿಂಗಳ ಕಾಲ ವಿಶ್ರಾಂತಿ ಪಡೆಯಲು ಮತ್ತು ಚೇತರಿಸಿಕೊಳ್ಳಲು ಕರ್ನಾಟಕಕ್ಕೆ ಬಂದಿದ್ದಾರೆ.
ದಲೈಲಾಮಾ ಅವರು ಬೈಲುಕುಪ್ಪೆಯ ತಾಶಿ ಲುನ್ಪೋ ಮಠದಲ್ಲಿ ಕೆಲವು ಬೋಧನೆಗಳನ್ನು ನಡೆಸುತ್ತಿದ್ದಾರೆ.
ಈ ಹಿನ್ನೆಲೆಯಲ್ಲಿಂದು ಧರ್ಮಗುರು ದಲೈಲಾಮಾ ಅವರನ್ನು ಇಂದು ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ತಮ್ಮ ಪತ್ನಿ ದಿವ್ಯಾ ಮಂತರ್ ಜೊತೆ ಭೇಟಿ ಮಾಡಿ ಆಶೀರ್ವಾದ ಪಡೆದರು. ನಂತರದಲ್ಲಿ ವಿಶೇಷವಾದ ಕಾಫಿ ಹಾರವನ್ನು ಹಾಕುವ ಮೂಲಕ ದಲೈಲಾಮಾ ಅವರನ್ನು ಗೌರವಿಸಿದರು.