Mysore
17
clear sky

Social Media

ಬುಧವಾರ, 07 ಜನವರಿ 2026
Light
Dark

ಎಂಸಿಡಿಸಿಸಿ ಬ್ಯಾಂಕ್‌ ಚುನಾವಣೆ : ಹೀಗಿದೆ ಗೆದ್ದವರ ಪಟ್ಟಿ

MCDCC Bank Election: Here is the List of Winners

ಮೈಸೂರು : ತೀವ್ರ ಪೈಪೋಟಿಯಿಂದ ಕೂಡಿದ್ದ ಮೈಸೂರು-ಚಾಮರಾಜನಗರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ನ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಗುರುವಾರ ನಡೆದ ಚುನಾವಣಾ ಮತದಾನವು ಬಿರುಸಿನಿಂದ ಜರುಗಿತು. ಬಳಿಕ ಫಲಿತಾಂಶ ಪ್ರಕಟವಾಯಿತು.

ನಗರದ ನಂಜರಾಜ ಬಹದ್ದೂರ್‌ ಛತ್ರದಲ್ಲಿ ಮತದಾನ ಹಾಗೂ ಮತ ಎಣಿಕೆ ಕಾರ್ಯ ನಡೆಯಿತು.

12 ಕ್ಷೇತ್ರಗಳ 29 ಅಭ್ಯರ್ಥಿಗಳು ಕಣದಲ್ಲಿದ್ದರು. ನಿರ್ದೇಶಕ ಸ್ಥಾನಗಳಿಗೆ ಶಾಸಕರಾದ ಅನಿಲ್‌ ಚಿಕ್ಕಮಾದು, ಜಿ.ಡಿ ಹರೀಶ್‌ ಗೌಡ, ಪುಟ್ಟರಂಗಶೆಟ್ಟಿ ಹಾಗೂ ಗಣೇಶ್‌ ಪ್ರಸಾದ್‌ ಸ್ಪರ್ಧಿಸಿದ್ದರು.

ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆಯಲ್ಲಿ ಮತಗಳಿಕೆಯ ಪಟ್ಟಿ ಹೀಗಿದೆ.

ಕ್ಷೇತ್ರ 01-A ಮೈಸೂರು ತಾಲೂಕು
ಚಲಾವಣೆಯಾದ ಮತಗಳು-26
ಎಂ ಕೆಂಚಪ್ಪ – ಕಾಂಗ್ರೆಸ್-13
ಸಿದ್ದರಾಜು ಎಂ ಜಿ -ಜೆಡಿಎಸ್ – 12
ತಿರಸ್ಕೃತ ಮತ -01

ಕ್ಷೇತ್ರ 01-ಬಿ ನಂಜನಗೂಡು ತಾಲೂಕು
ಚಲಾವಣೆಯಾದ ಮತಗಳು-33
ಕೆ ರಾಜು – ಕಾಂಗ್ರೆಸ್-10
ಬಿ ಎನ್ ಸದಾನಂದ – ಬಿಜೆಪಿ-22
ತಿರಸ್ಕೃತ ಮತ -01

ಕ್ಷೇತ್ರ 01-C ಟಿ ನರಸೀಪುರ ತಾಲೂಕು
ಚಲಾವಣೆಯಾದ ಮತಗಳು- 32
ಸಿ,ಬಸವಗೌಡ- ಕಾಂಗ್ರೆಸ್-14
ಟಿ ಪಿ ಬೋರೇಗೌಡ – ಜೆಡಿಎಸ್ – 18

ಕ್ಷೇತ್ರ 01-D ಎಚ್ ಡಿ ಕೋಟೆ ಮತ್ತು ಸರಗೂರು ತಾಲೂಕು
ಚಲಾವಣೆಯಾದ ಮತಗಳು-16
ಅನಿಲ್ ಕುಮಾರ್ ಸಿ- ಕಾಂಗ್ರೆಸ್-08
ಮಾದಪ್ಪ -0
ಜಿ ಕೆ ಲಕ್ಷ್ಮಿಪ್ರಸಾದ್-ಜೆಡಿಎಸ್ -08
ಶಿವಾನಂಜೇಗೌಡ-0
ಹೈ ಕೋರ್ಟ್ ಅನುಮತಿ ಪಡೆದ ಮತ-01

ಕ್ಷೇತ್ರ01-E ಹುಣಸೂರು ತಾಲ್ಲೂಕು
ಒಟ್ಟು ಚಲಾವಂಯಾದ ಮತಗಳು -14
ಗೋವಿಂದೆ ಗೌಡ -0
ಜೆ ಶಿವಣ್ಣ – ಕಾಂಗ್ರೆಸ್ -04
ಹರೀಶ್ ಜಿ ಡಿ- ಜೆಡಿಎಸ್-10

ಕ್ಷೇತ್ರ 01-F ಪಿರಿಯಾಪಟ್ಟಣ ತಾಲ್ಲೂಕು
ಒಟ್ಟು ಚಲಾವಣೆಯಾದ ಮತಗಳು -24
C N ರವಿ- ಜೆಡಿಎಸ್-08
ಲೋಕೇಶ ಇ ಪಿ – ಕಾಂಗ್ರೆಸ್-16
ಚಲಾವಣೆಯಾಗದ ಮತಗಳು -02

ಕ್ಷೇತ್ರ01-G ಕೆ ಆರ್ ನಗರ ಮತ್ತು ಸಾಲಿಗ್ರಾಮ ತಾಲ್ಲೂಕು
ಒಟ್ಟು ಚಲಾವಣೆಯಾದ ಮತಗಳು -24
ಅಮಿತ್ ವಿ ದೇವರಹಟ್ಟಿ – ಬಿ ಜೆ ಪಿ-10
ದೊಡ್ಡ ಸ್ವಾಮಿಗೌಡ – ಕಾಂಗ್ರೆಸ್-14
ಎಸ್ ಸಿದ್ದೇಗೌಡ – 0

ಕ್ಷೇತ್ರ 01-H ಚಾಮರಾಜನಗರ ತಾಲೂಕು
ಒಟ್ಟು ಚಲಾವಣೆಯಾದ ಮತಗಳು- 37
ಪುಟ್ಟರಂಗಶೆಟ್ಟಿ- ಕಾಂಗ್ರೆಸ್-19
ವವೃಷಬೇಂದ್ರಪ್ಪ – ಜೆಡಿಎಸ್-18

ಕ್ಷೇತ್ರ 01- I ಗುಂಡ್ಲುಪೇಟೆ ತಾಲೂಕು
ಚಲಾವಣೆಯಾದ ಮತಗಳು -37
ಹೆಚ್ ಗಣೇಶ್ ಪ್ರಸಾದ್- ಕಾಂಗ್ರೆಸ್ – 22
ಎಸ್ ಎಂ ವೀರಪ್ಪ – 09
ಹೈಕೋರ್ಟ್ ನಿಂದ ಅನುಮತಿ ಪಡೆದ ಮತ -01

ಕ್ಷೇತ್ರ 01-J ಕೊಳ್ಳೇಗಾಲ ಮತ್ತು ಹನೂರು ತಾಲೂಕು
ಚಲಾವಣೆಯಾದ ಒಟ್ಟು ಮತಗಳು -17
ನರೇಂದ್ರ – ಕಾಂಗ್ರೆಸ್ -09
ಬಿ ಎಸ್ ಮಲ್ಲೇಶ-08
ಕೋರ್ಟ್ ನಿಂದ ಅನುಮತಿ ಪಡೆದ ಮತ -01

 

ಕ್ಷೇತ್ರ 2 ಪಟ್ಟಣ ಸಹಕಾರ ಬ್ಯಾಂಕ್ ಗಳು ಮತ್ತು ಗೃಹ ನಿರ್ಮಾಣ ಸಹಕಾರ ಸಂಘಗಳ ಪ್ರತಿನಿಧಿ
ಒಟ್ಟು ಚಲಾವಣೆಯಾದ ಮತಗಳು -55
ಎಸ್ ಬಿ ಎಂ ಮಂಜು- ಜೆಡಿಎಸ್ -23
ಜಿ ಎನ್ ಮಂಜುನಾಥ – ಕಾಂಗ್ರೆಸ್ -22
ಹೆಚ್ ವಿ ರಾಜೀವ್ – ಬಿಜೆಪಿ- 09
ತಿರಸ್ಕೃತಗೊಂಡ ಮತ- 01
ಹೈಕೋರ್ಟ್ ನಿಂದ ಅನುಮತಿ ಪಡೆದ ಮತಗಳು – 03

ಕ್ಷೇತ್ರ 04 ತಾಲೂಕು ಜಿಲ್ಲೆ ಹಾಗೂ ಜಿಲ್ಲಾ ಮಟ್ಟ ಮೇಲ್ಪಟ್ಟು ಕಾರ್ಯ ವ್ಯಾಪ್ತಿ ಹೊಂದಿರುವ ಸಹಕಾರ ಸಂಘಗಳ ಪ್ರತಿನಿಧಿ.
ಚಲಾವಣೆಯಾದ ಮತಗಳು -50
ಎಸ್ ಚಂದ್ರಶೇಖರ್ -ಕಾಂಗ್ರೆಸ್ -23
ಟಿ ರಾಮೇಗೌಡ-ಜೆಡಿಎಸ್ – 27
ಹೈ ಕೋರ್ಟ್ ನಿಂದ ಅನುಮತಿ ಪಡೆದ ಮತಗಳು – 09

Tags:
error: Content is protected !!