ಸರಗೂರು: ಮೈಸೂರು ಜಿಲ್ಲೆ ಸರಗೂರು ತಾಲ್ಲೂಕಿನ ಬೆಣ್ಣೆಗೆರೆ ಗ್ರಾಮದಲ್ಲಿ ಹುಲಿ ಸೆರೆಗೆ ಕಾರ್ಯಾಚರಣೆ ಶುರುವಾಗಿದ್ದು, 130ಕ್ಕೂ ಹೆಚ್ಚು ಸಿಬ್ಬಂದಿ ಸ್ಥಳದಲ್ಲೇ ಠಿಕಾಣಿ ಹೂಡಿದ್ದಾರೆ.
ಕಳೆದ ಸೋಮವಾರದಿಂದ ಹುಲಿ ಸೆರೆ ಕಾರ್ಯಾಚರಣೆ ನಡೆಸಲಾಗುತ್ತಿದ್ದು, ಸಾಕಾನೆಗಳಾದ ಮಹೇಂದ್ರ, ಭೀಮ, ರೋಹಿತ ಆನೆಗಳ ಮೂಲಕ ಹುಲಿಯನ್ನು ಹೇಗಾದರೂ ಮಾಡಿ ಸೆರೆ ಹಿಡಿಯಲೇಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಪಣ ತೊಟ್ಟಿದ್ದಾರೆ.
ಹುಲಿ ಸೆರೆಗೆ ಬೋನು ಅಳವಡಿಸಲಾಗಿದ್ದು, 130ಕ್ಕೂ ಹೆಚ್ಚು ಅರಣ್ಯ ಸಿಬ್ಬಂದಿಯನ್ನು ಬಳಸಿಕೊಳ್ಳಲಾಗಿದೆ.
ಇದನ್ನೂ ಓದಿ:-ಟಿ.ನರಸೀಪುರ| ಆಸ್ತಿಗಾಗಿ ಸಹೋದರಿಯರಿಂದ ಕಿರುಕುಳ: ಸಹೋದರ ಆತ್ಮಹತ್ಯೆ
ಇನ್ನು ಜಮೀನಿನಲ್ಲಿ ಹಸುಗಳನ್ನು ಮೇಯಿಸುವ ವೇಳೆ ಹಠಾತ್ ದಾಳಿ ನಡೆಸಿದ ಹುಲಿಯು ರೈತ ರಾಜಶೇಖರಮೂರ್ತಿ ಎಂಬುವವರನ್ನು ಬಲಿಪಡೆದಿತ್ತು. ಈ ಹಿನ್ನೆಲೆಯಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸೂಚನೆ ಮೇರೆಗೆ ಹುಲಿ ಸೆರೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ.





