Mysore
22
overcast clouds

Social Media

ಗುರುವಾರ, 18 ಡಿಸೆಂಬರ್ 2025
Light
Dark

ಕಪಿಲಾ ನದಿಗೆ ಹಾರಿ ವ್ಯಕ್ತಿ ಆತ್ಮಹತ್ಯೆ

death

ನಂಜನಗೂಡು : ಮಂಡ್ಯದ ಮೂಲದ ವ್ಯಕ್ತಿಯೊಬ್ಬರು ನಂಜಗೂಡಿನ ಕಪಿಲಾ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ಜರುಗಿದೆ.

ಮಂಡ್ಯ ತಾಲೂಕಿನ ಬೆಳ್ಳಂಗನ ಹುಂಡಿಯ ಶಿಕ್ಷಕ ಚಂದ್ರು (45) ನಂಜನಗೂಡಲ್ಲಿ ಕಪಿಲಾ ನದಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ.

ಮಂಗಳವಾರ ನಂಜನಗೂಡಿಗೆ ಕಾರಿನಲ್ಲಿಬಂದ ಅವರು ರಾಷ್ಟ್ರೀಯ ಹೆದ್ದಾರಿ 766ನ ಕಪಿಲಾ ಸೇತುವೆ ಮೇಲೆ ತಮ್ಮ ಕಾರು ನಿಲ್ಲಿಸಿ ಚಪ್ಪಲಿ ಮೊಬೈಲು ಹಾಗೂ ಕಾರಿನ ಕೀ-ಯನ್ನು ಕಾರಿನಲ್ಲೇ ಬಿಟ್ಟು ಅಲ್ಲೇ ಸೇತುವೆಯಿಂದ ನದಿಗೆ ಜಿಗಿದು ಅಸು ನೀಗಿದ್ದಾರೆ ಎನ್ನಲಾಗಿದೆ.

ಬಾಗಿಲು ತೆರದ ಕಾರು ಬಹಳ ಸಮಯ ಅಲ್ಲೆ ನಿಂತಿರುವದನ್ನು ಕಂಡವರು ಪೊಲೀಸರಿಗೆ ಸುದ್ದಿ ತಲುಪಿಸಿ ಅವರು ಬಂದು ಪರಿಕ್ಷಿಸಿ ಮಂಡ್ಯ ನೋಂದಣಿಯ ಕಾರಿನಿಂದ ಮಾಲಿಕರ ವಿಳಾಸ ಪತ್ತೆ ಮಾಡಿದಾಗ ಈ ಆತ್ಮಹತ್ಯೆಯ ಸುಳಿವು ದೊರಕಿತು.

ನಂತರ ನಂಜನಗೂಡು ನಗರ ಠಾಣೆಯ ಎಸ್ ರವೀಂದ್ರ ಹಾಗೂ ತಿಮ್ಮಯ್ಯ ಮೂರು ತೆಪ್ಪಗಳನ್ನು ತರಿಸಿ ನುರಿತ ಈಜುಗಾರರಿಂದ ಕಪಿಲಾ ನದಿಯನ್ನು ಜಾಲಾಡಿಸಿದ ಪರಿಣಾಮ ಚಂದ್ರು ದೇಹ ಸೇತುವೆಯಿಂದ 1.ಕಿ.ಮಿ ದೂರದಲ್ಲಿ ಅಯ್ಯಪ್ಪ ಸ್ವಾಮಿ ದೇಗುಲಬಳಿ ಪತ್ತೆಯಾಯಿತು.

ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡ ಪಟ್ಟಣದ ಪೋಲಿಸರು ನದಿಯಿಂದ ಶವವನ್ನು ತೆಗೆದು ಮರಣೋತ್ತರ ಪರಿಕ್ಷೆಗೆ ಕಳಿಸಿದರು.

ಜಿ.ಪಂ ಉದ್ಯೋಗಿ ಪತ್ನಿ ಭಾಗ್ಯ ಹಾಗೂ ಮಕ್ಕಳಾದ ಮನೋಜ ಪಾಟೀಲ್ ಹಾಗೂ ಭಾನುಪ್ರಕಾಶರನ್ನು ಅಗಲಿದ ಮಂಜು ಅವರ ಆತ್ಮಹತ್ಯೆಗೆ ಕಾರಣ ಏನು ಎಂಬುದು ತಿಳಿಯದಾಗಿದೆ.

Tags:
error: Content is protected !!