ಮೈಸೂರು: ಬೆಟ್ಟದ ಪುರದ ಮಲ್ಲಿಗೆ ಕೊಲೆ ಪ್ರಕರಣಕ್ಕೆ (Mallige Murder Case) ಸಂಬಂದಿಸಿದ ಇಂದು ನ್ಯಾಯಾಲಯ ನೀಡಿದ ತೀರ್ಪುಗೆ ಆರೋಪಿ ಸ್ಥಾನದಲ್ಲಿದ್ದ ಸುರೇಶನ ತಂದೆ ಗಾಂಧಿ ಸಂತಸ ಪಟ್ಟಿದ್ದಾರೆ. ಈ ಬಗ್ಗೆ ಮೈಸೂರಿನ ನ್ಯಾಯಾಲಯದ ಮುಂಭಾಗ ಮಾಧ್ಯಮಗಳೊಂದಿಗೆ ಮಾತನಾಡಿ, ಮಗನ ಮೇಲಿದ್ದ ಆರೋಪಿ ಸ್ಥಾನ ಬಿಡುಗಡೆಯಾಗಿದ್ದು ಖುಷಿ ತಂದಿದೆ ಎಂದರು.
ಈ ಪ್ರಕರಣದಲ್ಲಿ ಪೊಲೀಸರಿಗೆ ಶಿಕ್ಷೆ ಆಗಬೇಕು. ನನ್ನ ಮಗ ಎರಡು ವರ್ಷ ಜೈಲಿನಲ್ಲಿ ಇದ್ದ, ನಾವು ಅವರಿವರ ಕಾಲು ಹಿಡಿದು ನ್ಯಾಯ ಪಡೆದುಕೊಂಡಿದ್ದೇವೆ. ಆತನ ಶಿಕ್ಷೆಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಈ ಪ್ರಕರಣದಿಂದ ಎಲ್ಲಾ ಪೊಲೀಸರಿಗೆ ಪಾಠ. ಒಬ್ಬ ಪೊಲೀಸ ನಿಂದ ಇತರೆ ನೂರು ಪೊಲೀಸರು ಪಾಠ ಕಲಿತಂತೆ ಆಗಿದೆ. ತಪ್ಪಿತಸ್ತರಿಗೆ ಶಿಕ್ಷೆಯಾಗಬೇಕು. ನ್ಯಾಯದೀಶರ ತೀರ್ಪು ನಮಗೆ ಖುಷಿ ತಂದಿದೆ, ನ್ಯಾಯಾಲಯದ ವಾದ ವಿವಾದದಲ್ಲಿ ನ್ಯಾಯದೀಶರು ಪೊಲೀಸರಿಗೆ ಚಿಮಾರಿ ಹಾಕಿದ್ದಾರೆ ಎಂದು ಆರೋಪಿ ಸುರೇಶ ತಂದೆ ಗಾಂಧಿ ಹೇಳಿದ್ದಾರೆ.




