ಹುಲ್ಲಹಳ್ಳಿ : ಹಾಡಹಗಲೇ ಹುಲಿ ದಾಳಿ ಮಾಡಿ ಹಸುವೊಂದನ್ನು ಬಲಿ ಪಡೆದಿರುವ ಘಟನೆ ಸಮೀಪದ ಯಾಲೇಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಮಂಜಪಾಟೀಲ್ ಎಂಬುವವರು ತಮ್ಮ ಜಮೀನಿನಲ್ಲಿ ಮೇಯುಸುತ್ತಿದ ವೇಳೆ ಪಕ್ಕದಲ್ಲೇ ಪೊದೆಯಲ್ಲಿ ಹುಲಿ ಹಸುವಿನ ಮೇಲೆ ಏಕಾಏಕಿ ದಾಳಿ ಮಾಡಿ ಅರೆಬರೆ ತಿದ್ದು ಬಿಸಾಡಿ ಹೋಗಿದೆ. ಪಕ್ಷದಲ್ಲೇ ಇದ್ದ ಮಾಲೀಕ ಮಂಜುಪಾಟೀಲ್ ಅವರು ಕಿರುಚಾಡಿಕೊಂಡಾಗ ಹುಲಿ ಗಾಬರಿಯಿಂದ ಪರಾರಿಯಾಗಿದೆ. ವಿಷಯ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸ್ಥಳದಲ್ಲಿ ಸಿಸಿ ಕ್ಯಾಮಾರವನ್ನು ಅಳವಡಿಸಲಾಗಿದೆ.
ಇದನ್ನು ಓದಿ : ಕಾಡಿನಿಂದ ಹೊರಬಂದ 20 ಹುಲಿಗಳು ; ಕಾಡಂಚಿನ ಜನರಲ್ಲಿ ಹೆಚ್ಚಿದ ಆತಂಕ
ಗ್ರಾ ಪಂ ಸದಸ್ಯ ಗುರು ಪ್ರಸಾದ್ ಮಾತನಾಡಿ ಈ ಭಾಗದಲ್ಲಿ ರೈತರು ತಮ್ಮ ಜಮೀನುಗಳಿಗೆ ಹೋಗಿ ಕೆಲಸ ಮಾಡುತ್ತಾರೆ. ಈಗಿರುವಾಗ ಹಾಡಹಗಲೇ ಹುಲಿ ಹಸುವನ್ನು ಬಲಿ ಪಡೆದಿರುವುದ್ದರಿಂದ ಗ್ರಾಮದಲ್ಲಿ ಭಯದ ವಾತವರಣ ಕಾಣುತ್ತಿದೆ. ಅರಣ್ಯ ಅಧಿಕಾರಿಗಳು ತಕ್ಷಣದಲ್ಲಿ ಹುಲಿಯನ್ನು ಸೆರೆ ಹಿಡಿದು ರೈತರ ಕೃಷಿ ಕೆಲಸಕ್ಕೆ ಅನುಕೂಲ ಮಾಡಿಕೊಡಬೇಕು. ಲಕ್ಷಾಂತರ ಬೆಲೆ ಬಾಳುವ ಹಸು ಬಲಿಯಾಗಿರುವುದ್ದರಿಂದ ಹಸುವಿನ ಮಾಲೀಕನಿಗೆ ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.





