Mysore
25
overcast clouds
Light
Dark

ಚಿರತೆ-ಆನೆ ಕಾರ್ಯಪಡೆ ಸಿಬ್ಬಂದಿಗಳಿಗೆ ಎರಡನೇ ಹಂತದ ಕಾರ್ಯಗಾರ !

ಮೈಸೂರು : ಜಿಲ್ಲೆಯ ಸುತ್ತಾಮುತ್ತಾ ಹೆಚ್ಚಾಗುತ್ತಿರುವ ಚಿರತೆ, ಆನೆ ಹಾಗೂ ವನ್ಯಪ್ರಾಣಿಗಳ ಉಪಟಳ ನಿಯಂತ್ರಣಕ್ಕಾಗಿ ಮೈಸೂರು ವ್ಯಾಪ್ತಿಯಲ್ಲಿ ಚಿರತೆ ಕಾರ್ಯಪಡೆಯನ್ನು ಹಾಗೂ ಆನೆ ಕಾರ್ಯಪಡೆಯನ್ನು ರಚಿಸಲಾಗಿರುತ್ತದೆ ಎಂದು ಭಾ.ಅ.ಸೇ, ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ಆರ್ ತಿಳಿಸಿದರು.

ನಗರದ ಇಲವಾಲದಲ್ಲಿರುವ ಅರಣ್ಯ ರಕ್ಷಕರ ತರಬೇತಿ ಕೇಂದ್ರಲ್ಲಿ ಏರ್ಪಡಿಸಿದ್ದ ಚಿರತೆ ಮತ್ತು ಆನೆಗಳನ್ನು ಸಂರಕ್ಷಣೆ ಮತ್ತು ನಿರ್ವಹಣೆ ಮಾಡುವ ಬಗ್ಗೆ, ಚಿರತೆ ಮತ್ತು ಆನೆ ಕಾರ್ಯಪಡೆಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಿಗೆ 2ನೇ ಕಾರ್ಯಗಾರದಲ್ಲಿ ಮಾತನಾಡಿದ ಅವರು, ಸಿಬ್ಬಂದಿಗಳಿಗೆ ಮಾನವ-ವನ್ಯಪ್ರಾಣಿ ಸಂಘರ್ಷ ನಿಯಂತ್ರಣದಲ್ಲಿರುವ ಸವಾಲುಗಳು, ಸಿಬ್ಬಂದಿಗಳ ಕರ್ತವ್ಯ ಜವಾಬ್ದಾರಿ, ಶಿಸ್ತು, Team work ಮತ್ತು ಕಾರ್ಯಚರಣೆಗಳ ವೇಳೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮಾಹಿತಿಗಳನ್ನು ನೀಡಿದರು.

ಅಲ್ಲದೇ ಕಾರ್ಯಗಾರಕ್ಕೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಡಾ. ಚಂದ್ರಶೇಖರ್, Cauvery Multi Speciality Hospital ರವರು ಹೃದಯದ ಆರೋಗ್ಯ ಮತ್ತು ಜೀವನ ನಿರ್ವಹಣೆ ಬಗ್ಗೆ ಮಾಹಿತಿಗಳನ್ನು ನೀಡಿದರು.

ಕಾರ್ಯಗಾರದಲ್ಲಿ ಚಿರತೆ ಕಾರ್ಯಪಡೆಯ 45 ಸಂಖ್ಯೆ, ಆನೆ ಕಾರ್ಯಪಡೆಯ 32 ಸಂಖ್ಯೆ ಹೊರಗುತ್ತಿಗೆ ನೌಕರರು ಸೇರಿದಂತೆ 20 ಸಂಖ್ಯೆ ಮಂಚೂಣಿ ಸಿಬ್ಬಂದಿಗಳು ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ  ಆನೆ ಮತ್ತು ಚಿರತೆಗಳಿಗೆ ಸಂಬಂದಿಸಿದಂತೆ ಕ್ಷೇತ್ರಕಾರ್ಯ ನಿರ್ವಹಿಸುತ್ತಿರುವ ವಿವಿಧ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಿದರು ಹಾಗೂ Mock Drill ನಡೆಸಿದರು.

ಕಾರ್ಯಗಾರದ ಅಂತಿಮ ಘಟ್ಟದಲ್ಲಿ ಶ್ರೀ ಮಹಾದೇವಯ್ಯ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು, ಹುಣಸೂರು ವಿಭಾಗ, ಹುಣಸೂರು ಇವರು ವಂದರ್ನಾಪಣೆ ಮಾಡುವ ಮೂಲಕ ಕಾರ್ಯಗಾರವನ್ನು ಮುಕ್ತಾಯಗೊಳಿಸಲಾಯಿತು.

ಕಾರ್ಯಗಾರದಲ್ಲಿ ಡಾ.ಮಾಲತಿಪ್ರಿಯಾ ಎಂ. ಭಾ.ಅ.ಸೇ, ಅರಣ್ಯ ಸಂರಕ್ಷಣಾಧಿಕಾರಿಗಳು, ಮೈಸೂರು ವೃತ್ತ, ರವರು, ಡಾ. ಬಸವರಾಜ ಕೆ.ಎನ್.ಭಾ.ಅ.ಸೇ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳು, ಮೈಸೂರು ವಿಬಾಗ,, ಶ್ರೀಮತಿ ಸೀಮಾ ಪಿ.ಎ. ಭಾ.ಅ.ಸೇ., ಹುಣಸೂರು ವಿಭಾಗ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಇತರೆ ಸಿಬ್ಬಂದಿಗಳು ಭಾಗವಹಿಸಿದ್ದರು.

 

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ