ಮೈಸೂರು :ತಾಲ್ಲೂಕಿನ ಬೆಳವಾಡಿಯ ಡಿಕೇಮ್ ರೆಜಿನ್ಸ್ ಕಾರ್ಖಾನೆಯ ಸಮೀಪದಲ್ಲಿ ಇರಿಸಲಾಗಿದ್ದ ಬೋನಿಗೆ ಗಂಡು ಚಿರತೆಯು ಬಿದ್ದಿದ್ದು ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆಯನ್ನು ಬಂಡೀಪುರ ರಾಷ್ಟ್ರೀಯ ಉದ್ಯಾನವನಕ್ಕೆ ಚಿರತೆಯನ್ನು ರವಾನಿಸಿದ್ದಾರೆ.
ಚಿರತೆಯು ಸುಮಾರು 6 ರಿಂದ 7 ವರ್ಷದ್ದಾಗಿದ್ದು, ಈ ಚಿರತೆಯನ್ನು ಸೆರೆ ಹಿಡಿಯುವ ಸಲುವಾಗಿ ಬೋನು ಇರಿಸಲಾಗಿತ್ತು. ಅರಣ್ಯ ಇಲಾಖೆಯ ಈ ವಲಯದ ಅಧಿಕಾರಿಗಳಾದ ಆರ್ ಎಫ್ ಓ ಸುರೇಂದ್ರ ಕೆ ಅವರ ಮಾರ್ಗದರ್ಶನದ ಮೇರೆಗೆ ಈ ಚಿರತೆಯನ್ನು ಇದೀಗ ಉದ್ಯಾನವನಕ್ಕೆ ರವಾನಿಸಲಾಗಿದೆ.