ಪ್ರಶಾಂತ್ ಎಸ್ ಮೈಸೂರು
ಎಚ್ ಡಿ ಕೋಟೆ : ಮಳೆಯ ಆರ್ಭಟದಿಂದ ಪಟ್ಟಣದ ವಡ್ಡರಗುಡಿ ಗ್ರಾಮಕ್ಕೆ ಹೋಗುವ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ನೆನ್ನೆ ಸುರಿದ ಬಾರಿ ಮಳೆಯಿಂದ ಹೆಬ್ಬಾಳ ಜಲಾಶಯ ಭರ್ತಿಯಾಗಿ ಕೋಡಿ ಬಿದ್ದ ಪರಿಣಾಮ ವಡ್ಡರಗುಡಿ ಸೇತುವೆ ಜಲಾವೃತಗೊಂಡು ಜನಸಾಮಾನ್ಯರ ಸಂಚಾರ ಸ್ಥಗಿತಗೊಂಡಿದೆ, ಹಲವು ತಿಂಗಳಿನಿಂದ ಸಾಕಷ್ಟು ಬಾರಿ ಜಲಾವೃತಗೊಳ್ಳುತ್ತಿರುವ ಈ ಸೇತುವೆಯಿಂದಾಗಿ ಇಲ್ಲಿನ ಜನರು ಸಮಸ್ಯೆಯನ್ನು ಎದುರಿಸುವಂತಾಗಿದೆ . ಅಲ್ಲದೇ ಸೇತುವೆಯ ಅಕ್ಕಪಕ್ಕದ ತಡೆಗೋಡೆಗಳು ಕೂಡ ಶಿಥಿಲ ವ್ಯವಸ್ಥೆಯಲ್ಲಿದೆ. ಈ ವಿಚಾರ ಕುರಿತು ಸಂಬಂಧಪಟ್ಟವರಿಗೆ ಮಾಹಿತಿ ನೀಡಿದರು ಸಮಸ್ಯೆ ಮಾತ್ರ ಪರಿಹಾರವಾಗಿಲ್ಲ . ಇನ್ನಾದರು ಈ ಸಮಸ್ಯೆ ತಪ್ಪಿಸಲು ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಗಮನಹರಿಸುವರಾ ನೋಡಬೇಕಿದೆ.
ಪ್ರತಿಬಾರಿಯು ಮಳೆ ಬಂದಾಗ ಈ ಸಮಸ್ಯೆ ಆಗುತ್ತಲೇ ಇದೆ. ಅದರು ಸಂಬಂಧಪಟ್ಟವರು ಯಾರು ಕೂಡ ಇದರ ಬಗ್ಗೆ ಗಮನಹರಿಸುತ್ತಿಲ್ಲ. ನಾವು ಪ್ರತಿದಿನ ಕೂಲಿ ಕೆಲಸಕ್ಕೆ ಹೋಗುವುದು ಅದೇ ರಸ್ತೆಯಲ್ಲಿ ರಾತ್ರಿ ವೇಳೆಯು ಒಡಾಡುತ್ತೇವೆ. ಅಲ್ಲದೇ ಸೇತುವೆ ಬಳಿ ಒಂದು ಬೀದಿ ದೀಪ ಕೂಡ ಇಲ್ಲ. ಹೀಗಾಗಿ ಮಳೆ ಬಂದಾಗ ಸೇತುವೆ ಸಮಸ್ಯೆ, ಇಲ್ಲದಿದ್ದಾಗ ಬೀದಿ ದೀಪದ ಸಮಸ್ಯೆ. ಇಂತಹ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಇನ್ನಾದರು ಸಂಬಂಧಪಟ್ಟವರು ಸಮಸ್ಯೆಯನ್ನು ಗಮನಹರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಬೇಕಿದೆ.





