Mysore
24
broken clouds

Social Media

ಭಾನುವಾರ, 15 ಜೂನ್ 2025
Light
Dark

ಯುವ ಬ್ರಿಗೇಡ್‌ ಕಾರ್ಯಕರ್ತನ ಕೊಲೆಯನ್ನು ಧರ್ಮಾಧಾರಿತ ಬೆಂಬಲ ಪಡೆಯಲು ಬಳಸಿಕೊಳ್ಳುತ್ತಿದ್ದಾರೆ : ದಸಂಸ

ಟಿ. ನರಸೀಪುರ : ಮಾಜಿ ಸಚಿವ ಸಿ.ಟಿ. ರವಿ ಮತ್ತು ಯುವ ಬ್ರಿಗೇಡ್‌ನ ಚಕ್ರವರ್ತಿ ಸೂಲಿಬೆಲೆ ವಿರುದ್ಧ ಸರ್ಕಾರ ಸ್ವಯಂ ಪ್ರೇರಿತ ದೂರು ದಾಖಲಿಸಿ ಬಂಧಿಸಬೇಕು ಎಂದು ದಸಂಸ ನಾಗವಾರ ಬಣದ ವತಿಯಿಂದ ಜಿಲ್ಲಾ ಸಂಚಾಲಕ ಎಸ್‌.ಆರ್‌. ಶಶಿಕಾಂತ ಸರ್ಕಾರವನ್ನು ಒತ್ತಾಯಿಸಿದರು.

ವೇಣುಗೋಪಾಲ್‌ ಕೊಲೆಯನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ, ವೈಯಕ್ತಿಕ ದ್ವೇಷದಿಂದ ಮತ್ತು ಸ್ವ ಪ್ರತಿಷ್ಠೆಯಿಂದ ಘಟನೆ ನಡೆದಿದೆ ಎಂದು ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ವಿಚಾರವಾಗಿ ತಾಲೂಕಿಗೆ ಭೇಟಿ ನೀಡಿದ ಚಕ್ರವರ್ತಿ ಸೂಲಿಬೆಲೆ, ಸಿ.ಟಿ. ರವಿ, ಅಶ್ವತ್‌ ನಾರಾಯಣ, ಎನ್‌. ಮಹೇಶ ಅವರು ಈ ಕೊಲೆಯನ್ನು ಹಿಂದು ಕಾರ್ಯಕರ್ತನ ಕೊಲೆ ಎಂದು ಬಿಂಬಿಸುವ ಕೆಲಸ ಮಾಡುತ್ತಿದ್ದಾರೆ. ಯುವಕರಲ್ಲಿ ವಿಷ ಬೀಜ ಬಿತ್ತಿ ಮುಂಬರುವ ಚುನಾವಣೆಯಲ್ಲಿ ಧರ್ಮಾಧಾರಿತ ಬೆಂಬಲ ಪಡೆಯಲು ಮಾಡುತ್ತಿರುವ ವ್ಯವಸ್ಥಿತ ಪಿತೂರಿ ಎಂದು ಅವರು ಆರೋಪಿಸಿದರು.

ಹನುಮ ಜಯಂತಿಗೆ ಅನುಮತಿ ನೀಡಿದ್ದರಿಂದ ಈ ರೀತಿ ಸಮಸ್ಯೆ ಸೃಷ್ಟಿಯಾಗಿದೆ ನಮ್ಮ ತಾಲೂಕಿಗೆ ಹನುಮ ಜಯಂತಿಯ ಅವಶ್ಯಕತೆ ಇಲ್ಲ, ನೂರಾರು ವರ್ಷಗಳಿಂದ ಧಾರ್ಮಿಕ ಜಾತ್ರೆಗಳು ನಡೆಯುತ್ತಿರುವುದರಿಂದ ಹೊಸದಾಗಿ ಪ್ರಚಾರ ಮಾಡುವ ಅವಶ್ಯಕತೆ ಇಲ್ಲ, ಮುಂದಿನ ದಿನಗಳಲ್ಲಿ ಸರ್ಕಾರ ಹನುಮ ಜಯಂತಿಗೆ ಅನುಮತಿ ನೀಡಬಾರದು, ಬಿಜೆಪಿಯ ಯಾವುದೇ ನಾಯಕರಿಗೆ ತಾಲೂಕು ಪ್ರವೇಶಕ್ಕೆ ನಿರ್ಬಂಧ ವಿಧಿಸಬೇಕು, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು, ವೇಣುಗೋಪಾಲ್‌ ಕುಟುಂಬಕ್ಕೆ ಸರ್ಕಾರ ಆರ್ಥಿಕ ಸಹಕಾರ ನೀಡಬೇಕು ಎಂದು ಅವರು ಅಗ್ರಹಿಸಿದರು. ಶಿವಣ್ಣ, ಎಸ್‌. ನಂಜುಂಡಯ್ಯ, ಮಹದೇವಸ್ವಾಮಿ, ಮಂಜು, ನಾಗರಾಜು ಇದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!