Mysore
20
clear sky

Social Media

ಗುರುವಾರ, 05 ಡಿಸೆಂಬರ್ 2024
Light
Dark

ಶುಂಠಿ ಶುದ್ಧೀಕರಣ ಘಟಕದಿಂದ ಕಪಿಲೆಯ ಒಡಲು ಕಲುಷಿತ

ಮೈಸೂರು: ಮೈಸೂರು ಜಿಲ್ಲೆಯ ಎಚ್‌.ಡಿ.ಕೋಟೆ ತಾಲ್ಲೂಕಿನಲ್ಲಿ ಶುಂಠಿ ಶುದ್ಧೀಕರಣ ಕೇಂದ್ರಗಳು ಹೆಚ್ಚಾಗಿದ್ದು, ಶುಂಠಿ ಸ್ವಚ್ಚಗೊಳಿಸಲು ವಿವಿಧ ಬಗೆಯ ರಾಸಾಯನಿಕಗಳನ್ನು ಬಳಸುತ್ತಿರುವುದರಿಂದ ಪಕ್ಕದಲ್ಲೇ ಇರುವ ಕಬಿನಿ ನಾಲೆ ಕಲುಷಿತವಾಗುತ್ತಿದೆ.

ತಾಲ್ಲೂಕಿನಲ್ಲಿ ಐದಕ್ಕೂ ಹೆಚ್ಚು ಶುದ್ಧೀಕರಣ ಕೇಂದ್ರಗಳಿವೆ. ಶುಂಠಿ ಶುದ್ದಿಗಾಗಿ ಈ ಘಟಕಗಳು ಬಳಸುತ್ತಿರುವ ರಾಸಾಯನಿಕಗಳಿಂದ ಕೂಡಿದ ನೀರು ಕಬಿನಿ ನಾಲೆ ಸೇರಿ ನೀರು ಕಲುಷಿತಗೊಳ್ಳುತ್ತಿದ್ದು, ಇದರಿಂದ ಜಾನುವಾರುಗಳು ಹಾಗೂ ಮನುಷ್ಯನ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ.

ಕೃಷಿಭೂಮಿಯನ್ನು ವಾಣಿಜ್ಯೇತರ ಕೆಲಸಗಳಿಗೆ ಬಳಿಸಿಕೊಳ್ಳುವ ಮುನ್ನ ಅನುಮತಿ ಪಡೆಯಬೇಕು. ಆದರೆ ಕಾನೂನು ಉಲ್ಲಂಘಿಸಿ ಶುದ್ಧೀಕರಣ ಘಟಕ ತೆರೆದಿರುವ ವ್ಯಕ್ತಿಗಳು ರಾಸಾಯನಿಕ ಬಳಸಿ ಶುಂಠಿ ಶುದ್ಧೀಕರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರೂ ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ.

ಈ ಕುರಿತು ಪುರಸಭೆ ಮುಖ್ಯಾಧಿಕಾರಿ ಸುರೇಶ್‌ ಅವರಿಂದ ಪತ್ರ ನೀಡಿದರೂ ಹಾಗೂ ಕೌನ್ಸಿಲ್‌ ಸಭೆಯಲ್ಲಿ ಚರ್ಚೆ ನಡೆದಿದ್ದರೂ ಅಧಿಕಾರಿಗಳು ಭಾರೀ ನಿರ್ಲಕ್ಷ್ಯ ಮಾಡುತ್ತಿದ್ದಾರೆ.

ಪರಿಸರ ಇಲಾಖೆ, ಮಾಲಿನ್ಯ ಮಂಡಳಿ, ಪರಿಸರ ಅಭಿಯಂತರರು, ಅರಣ್ಯ ಇಲಾಖೆ, ತಾಲ್ಲೂಕು ಆಡಳಿತಾಧಿಕಾರಿ, ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ನೀಡಿದರೂ ಏನು ಪ್ರಯೋಜನವಾಗಿಲ್ಲ. ಇವರ ನಿರ್ಲಕ್ಷ್ಯದಿಂದ ಅಮಾಯಕರ ಜೀವಗಳು ಬಲಿಯಾಗುವ ಸ್ಥಿತಿ ನಿರ್ಮಾಣವಾಗಿದೆ.

 

Tags: