Mysore
23
broken clouds

Social Media

ಶನಿವಾರ, 27 ಜೂನ್ 2026
Light
Dark

೫೦ರ ಸಂಭ್ರಮದಲ್ಲೇ ಕಬಿನಿ ಡ್ಯಾಂ ಬಹುತೇಕ ಭರ್ತಿ

ಎಚ್.ಡಿ.ಕೋಟೆ : ಕೇರಳ ಮತ್ತು ಕಬಿನಿ ಜಲಾಶಯ ವ್ಯಾಪ್ತಿಯಲ್ಲಿ ಭಾರಿ ಮಳೆಯಾಗುತ್ತಿದ್ದು, ಇದರಿಂದಾಗಿ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಜಲಾಶಯಕ್ಕೆ ಪ್ರತಿನಿತ್ಯವೂ ಕೂಡ ೪ ರಿಂದ ೫ ಸಾವಿರ ಕ್ಯೂಸೆಕ್‌ ನೀರು ಹರಿದು ಬರುತ್ತಿದೆ.

ಮತ್ತೊಂದು ಸಂತೋಷದ ವಿಷಯವೇನೆಂದರೆ ಕಬಿನಿ ಜಲಾಶಯ ನಿರ್ಮಾಣವಾಗಿ ೫೦ ವರ್ಷಗಳನ್ನ ಪೂರೈಸಿರುವ  ಸುವರ್ಣ ಸಂಭ್ರಮದಲ್ಲಿ ಜೊತೆ  ಈ ವರ್ಷ ಜುಲೈ ಮೊದಲ ವಾರದಲ್ಲೆ ಜಲಾಶಯ ಬಹುತೇಕ ಭರ್ತಿಯಾಗುತ್ತರುವ ಸಂಭ್ರಮವಾಗಿದೆ.

ಹತ್ತು ವರ್ಷಗಳಲ್ಲಿ ಎರಡನೇ ಬಾರಿಗೆ ಜುಲೈ ಮೊದಲ ವಾರದಲ್ಲೆ ಜಲಾಶಯ ಬಹುತೇಕ ಭರ್ತಿಯಾಗಿದೆ. ೨೨೮೪ ಗರಿಷ್ಠ ಮಟ್ಟದ ಕರ್ನಾಟಕದ ಕಬಿನಿ ಜಲಾಶಯದಲ್ಲಿ ೨೨೮೨.೪೫ ಅಡಿ ನೀರಿದೆ. ಜಲಾಶಯದ ಭದ್ರತೆ ಮತ್ತು ಸಂರಕ್ಷಣೆಯ ದೃಷ್ಠಿಯಿಂದ ಜಲಾಶಯದಿಂದ ೩ ಸಾವಿರ ಕ್ಯೂಸೆಕ್‌ ನೀರನ್ನು ನದಿಗೆ ಬಿಡಲಾಗಿದೆ.

Tags:
error: Content is protected !!