ಮೈಸೂರು : ಕೊನೆಯ ಆಷಾಡ ಶುಕ್ರವಾರದ ಪ್ರಯುಕ್ತ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಹೆಚ್. ಮುನಿಯಪ್ಪ ಅವರು ನಾಡದೇವತೆ ಚಾಮುಂಡೇಶ್ವರಿ ದರ್ಶನವನ್ನು ಪಡೆದರು.
ಆಷಾಢ ಮಾಸವು ಬಹಳ ವಿಶೇಷವಾಗಿದ್ದು, ಶಕ್ತಿ ದೇವತೆಗಳ ಆರಾಧನೆಗೆ ಹೆಚ್ಚು ಮಹತ್ವ ನೀಡಿರುವ ಮಾಸವಾಗಿದೆ. ನಾಡಿನ ಒಳಿತಿಗಾಗಿ ವಿಶೇಷ ಪೂಜೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಸಚಿವರ ಆಪ್ತ ಕಾರ್ಯದರ್ಶಿ ಡಾ.ನಟರಾಜ್ ಹಾಗೂ ಸಿಬ್ಬಂದಿಯವರು ಜೊತೆಗಿದ್ದರು.





