Mysore
29
scattered clouds

Social Media

ಬುಧವಾರ, 10 ಡಿಸೆಂಬರ್ 2025
Light
Dark

ಉದ್ಯೋಗ ಮೇಳಕ್ಕೆ ಚಾಲನೆ : ಅರ್ಜಿ ಹಿಡಿದು ಬಂದ ಯುವ ಸಮೂಹಕ್ಕೆ ಉದ್ಯೋಗದ ಭರವಸೆ

harish gowda

ಮೈಸೂರು : ಚಾಮರಾಜ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಹರೀಶ್‌ ಗೌಡ ಅವರ ಹುಟ್ಟು ಹಬ್ಬದ ಹಿನ್ನೆಲೆ ಜೆ.ಕೆ ಮೈದಾನದಲ್ಲಿ ಆಯೋಜಿಸಿದ್ದ ಬೃಹತ್‌ ಉದ್ಯೋಗ ಮೇಳ ಹಾಗೂ ಆರೋಗ್ಯ ಶಿಬಿರಕ್ಕೆ ಆಗಮಿಸಿದ್ದ ನೂರಾರು ಮಂದಿ ಮೇಳದ ಪ್ರಯೋಜನ ಪಡೆದರು.

ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಶ್ರೀ ಆದಿಚುಂಚನಗಿರಿ ಮಠದ ಶ್ರಿ ಸೋಮೇಶ್ವರನಾಥ ಸ್ವಾಮೀಜಿ, ಜನರ ಅನುಕೂಲಕ್ಕಾಗಿ ಮಾಡಿಕೊಂಡಿರುವ ಈ ಕಾರ್ಯಕ್ರಮ ನಿಜಕ್ಕೂ ವಿಸ್ಮಯವಾಗಿದೆ. ಜೊತೆಗೆ ಯುವಕರಿಗೆ ಉದ್ಯೋಗ ಹಾಗೂ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಆರೋಗ್ಯ ಕಾಪಾಡಿಕೊಳ್ಳುವುದರಲ್ಲಿ ಗಮನಹರಿಸಬೇಕೆಂದು ಆಯೋಜನೆ ಮಾಡಿದ್ದು ಬಂದಿರುವ ಪ್ರತಿಯೊಬ್ಬರು ಸದುಪಯೋಗಪಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಶಾಸಕ ಕೆ.ಹರೀಶ್ ಗೌಡ ಮಾತಾನಾಡಿ, ಯಾವುದೇ ವ್ಯಕ್ತಿ ಸಾಧನೆ ಮಾಡುವುದಕ್ಕೆ ತಂದೆ ತಾಯಿ ಜೊತೆ ಗುರುಗಳು ಕೂಡ ಮುಖ್ಯವಾಗಿದ್ದು, ಅದರಲ್ಲಿ ಒಬ್ಬರಾಗಿರುವವರು ನಂಜರಾಜೇ ಅರಸ್ ಅವರ ಮಾರ್ಗದರ್ಶನ ಹಾಗೂ ಆಶೀರ್ವಾದಿಂದ ಇವತ್ತು ಶಾಸಕನಾಗಿದ್ದೇನೆ ಎಂದರು.

ಮೇಳಕ್ಕೆ ಬಂದಿರುವ ಕಂಪೆನಿಗಳು ಎಲ್ಲ ಹಂತದ ಸಂದರ್ಶನವನ್ನು ಇಲ್ಲಿಯೇ ಮಾಡಿ, ಅಭ್ಯರ್ಥಿಗಳಿಗೆ ಇಲ್ಲಿಯೇ ಉದ್ಯೋಗ ಖಾತ್ರಿ ಮಾಡಿ ಪ್ರಮಾಣಪತ್ರ ನೀಡಬೇಕು ಎಂಬುದು ನನ್ನ ಆಶಯವಾಗಿದ್ದು, ಅದರಂತೆ ಉತ್ತಮವಾಗಿ ವ್ಯವಸ್ಥೆ ಮಾಡಲಾಗಿದೆ. ಉದ್ಯೋಗ ಮೇಳದಿಂದ ಯುವಕರಿಗೆ ಉಪಯೋಗವಾಗಲೆಂದು ಹಿಂದಿನಿಂದಲೂ ಉದ್ಯೋಗ ಮೇಳ ಅಯೋಜನೆ ಮಾಡಿದ್ದು 100 ಕ್ಕೂ ಹೆಚ್ಚು ಕಂಪನಿಗಳು ಭಾಗಿಯಾಗಿದ್ದು ಇದುವರೆಗೂ ಪದವಿ ಪಡೆದಂತಹ ವಿದ್ಯಾರ್ಥಿಗಳಿಗೆ ಉಪಯೋಗವಾಗಲಿದ್ದು ಎಲ್ಲರು ಸದುಪಯೋಗಪಡಿಸಿಕೊಳ್ಳಿ ಎಂದು ಹೇಳಿದರು.

ಹೊಲಿಗೆ ಯಂತ್ರ, ತಳ್ಳುವ ಗಾಡಿ ವಿತರಣೆ:
ಚಾಮರಾಜ ವಿಧಾನಸಭಾ ಕ್ಷೇತ್ರದ 500 ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ ವಿತರಣೆ ಮಾಡಲಾಯಿತು. ಕ್ಷೇತ್ರ ವ್ಯಾಪ್ತಿಯ ತಲಾ ಒಂದು ವಾರ್ಡ್ನ ನಲ್ಲಿರುವ ಒಬ್ಬರಿಗೆ ತಳ್ಳುವ ಗಾಡಿ ವಿತರಣೆ ಮಾಡುವುದರ ಜೊತೆಗೆ ಎಲ್ಲರಿಗೂ ಆಯುರ್ವೇದ ಗುಣ ಹೊಂದಿರುವ ಗಿಡಗಳನ್ನೂ ಉಚಿತವಾಗಿ ವಿತರಣೆ ಮಾಡಲಾಯಿತು.

ಭಾಗವಹಿಸಿದ್ದ ಕಂಪೆನಿಗಳು: ಆಟೋಮೊಬೈಲ್ ಮೆಕ್ಯಾನಿಕಲ್ ಕನ್‌ಸ್ಟ್ರಕ್ಷನ್, ಮಾರ್ಕೆಟಿಂಗ್, ಸೇಲ್ಸ್ ಅಂಡ್ ರೀಟೇಲ್ ಟೆಲಿಕಾಂ, ಬಿಪಿಒ, ಟೆಕ್ಸ್‌ಟೈಲ್, ಬ್ಯಾಂಕಿಂಗ್, ಫೈನಾನ್ಸ್, ಇನ್ಶೂರೆನ್ಸ್, ಹಾಸ್ಪಿಟಲ್ ಫಾರ್ಮಾಸಿಟಿಕಲ್ ಹೆಲ್ತ್ ಕೇರ್, ಸುಯೋಗ ಆಸ್ಪತ್ರೆ, ಡಿ. ಆರ್.ಎಮ್. ಆಸ್ಪತ್ರೆ, ಬಿ.ಎಂ.ಟಿ.ಸಿ. ಟ್ರಾನ್ಸ್‌ಪೋರ್ಟ್, ಆಹಾರ ಸಂಸ್ಕರಣೆ, ಹೋಟೆಲ್ ನಿರ್ವಹಣೆ, ಗಾರ್ಮೆಂಟ್ಸ್, ಸೆಕ್ಯೂರಿಟಿ ಸೇರಿದಂತೆ ನಾನಾ ವಿಭಾಗದ 80 ಕ್ಕೂ ಹೆಚ್ಚು ಕಂಪೆನಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದವು. ಮೇಳಕ್ಕೆ ಭಾಗವಹಿಸಿದ್ದ ಎಲ್ಲರಿಗೂ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು. ಉದ್ಯೋಗಾಕಾಂಕ್ಷಿಗಳು ತಮ್ಮ ವಿದ್ಯಾರ್ಹತೆಗೆ ಅನುಗುಣವಾಗಿರುವ ಕೆಲಸಕ್ಕೆ ಅರ್ಜಿ ಸಲ್ಲಿಸಿ ಸಂದರ್ಶನದಲ್ಲಿ ಭಾಗವಹಿಸಿದ್ದರು.

Tags:
error: Content is protected !!