ಮೈಸೂರು ; ನಗರದ ಪ್ರಮುಖ ವಾಣಿಜ್ಯಕೇಂದ್ರವಾದ ಅಂಗಡಿ ಬೀದಿಯಲ್ಲಿ ಹಬ್ಬದ ಸಾಮಾಗ್ರಿಗಳನ್ನು ಖರೀದಿಸುತ್ತಿರುವುದು ಕಂಡು ಬಂದಿತು. ಈಗಾಗಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದರೂ ಕೂಡ ಜನರು ಆಗತ್ಯ ವಸ್ತುಗಳಾದ ಹೂವು, ಹಣ್ಣು ಹಂಪಲು, ಹೊಸ ಬಟ್ಟೆಗಳನ್ನು ಖರೀದಿಸಿದರು. ನಿನ್ನೆ ಖರೀದಿ ಪ್ರಕ್ರಿಯೆ ನೀರಸವಾಗಿದ್ದರೂ ಇಂದು ವ್ಯಾಪಾರದಲ್ಲಿ ಚೇತರಿಕೆಕಂಡಿತು.
ಇನ್ನೂ ಪ್ರತಿ ವರ್ಷದಂತೆ ಈ ವರ್ಷವೂ ಸಹ ನಗರದ ಮೆಗಾಕಾಂಪ್ಲೆಕ್ಸ್ ಬಳಿ ನಿರ್ಮಿಸಿರುವ ಪಟಾಕಿ ಮಳಿಗೆಗಳ ಮುಂದೆಯೂ ಸಹ ಸಂಜೆಯ ವೇಳೆಗೆ ಜನಜಂಗುಳಿ ಹೆಚ್ಚು ಕಂಡು ಬಂದಿತು. ಪೋಷಕರು ಮಕ್ಕಳೊಡನೆ ಪಟಾಕಿ ಖರೀದಿಸಿದರು.
ನಂತರ ತಮ್ಮ ತಮ್ಮ ಮನೆಗಳ ಮುಂದೆ ಮಕ್ಕಳು ಖುಷಿಯಿಂದಪಟಾಕಿ ಸಿಡಿಸುವುದನ್ನು ಕಂಡು ಪೋಷಕರು ಸಹ ಮಕ್ಕಳ ಸಂತಸದಲ್ಲಿ ಪಾಲ್ಗೊಂಡರು. ಕೊರೊನಾದ ಕರಿನೆರಳಿಂದ 2 ವರ್ಷಗಳಿಂದ ಸ್ಥಗಿತಗೊಂಡಿತ್ತು. ಆದರೆ ಈ ಬಾರಿಯಾವುದೇ ಅಡೆ ತಡೆಗಳು ಇಲ್ಲ್ಲದೆ ಈ ಬಾರಿ ವಿಜೃಂಭಣೆಯಿಂದ ಹಬ್ಬವನ್ನು ಆಚರಿಸುತ್ತಿದ್ದಾರೆ.





