ಮೈಸೂರು: ಮುಂಬರುವ ವಿಧಾನಸಭಾ ಚುನಾವಣೆಗೆ ಅಭ್ಯರ್ಥಿಗಳು ಸಜ್ಜಾಗಿದ್ದಾರೆ. ಈಗಾಗಲೇ ಹುರಿಯಾಳುಗಳ ಮೊದಲ ಪಟ್ಟಿ ರಿಲೀಸ್ ಗೆ ತಯಾರಿ ನಡೆದಿದೆ.
ಚಾಮುಂಡಿ ಬೆಟ್ಟದಲ್ಲಿ ತಮ್ಮ ಕುಟುಂಬ ಹಾಗೂ ಜೆಡಿಎಸ್ ನಾಯಕರ ಜೊತೆಗೆ ತಾಯಿಯ ದರ್ಶನ ಪಡೆದ ಕುಮಾರಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿದರು. 30 – 40 ಸ್ಥಾನ ಬಂದ್ರೆ ನಾನು ಸಿಎಂ ಆಗುತ್ತೇನೆ ಎಂದು ನಮ್ಮವರು ಅಂದುಕೊಳ್ಳೋದು ಬೇಡ. ಈ ಬಾರಿ ಬಹುಮತ ಕೊಡಿ, ಪಂಚರತ್ನ ಯೋಜನೆ ಅನುಷ್ಠಾನ ಮಾಡುತ್ತೇನೆ, ಪಂಚರತ್ನದ 5 ಯೋಜನೆಗಳನ್ನು 5 ವರ್ಷಗಳಲ್ಲಿ ಅನುಷ್ಠಾನಗೊಳಿಸುತ್ತೇನೆ.
ಕಾರ್ಯಕ್ರಮ ಅನುಷ್ಠಾನ ಮಾಡದಿದ್ರೆ ನಾನು ಪಕ್ಷ ವಿಸರ್ಜನೆ ಮಾಡುತ್ತೇನೆ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ನಿಂತು ಈ ಮಾತನ್ನು ಹೇಳುತ್ತಿದ್ದೇನೆ ಎಂದರು. ಈ ಕುರಿತು ಚಾಮುಂಡಿ ಬೆಟ್ಟದಲ್ಲಿ ಮಾತನಾಡಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಈ ಬಾರಿ ಜೆ ಡಿ ಎಸ್ ಗೆ 30-40 ಸ್ಥಾನ ಬಂದ್ರೆ ನಾನು ಅಧಿಕಾರದಿಂದ ದೂರವಿರುತ್ತೇನೆ. ನಮ್ಮಲ್ಲೇ ಒಬ್ಬರನ್ನ ಆ ಸ್ಥಾನದಲ್ಲಿ ಕೂರಿಸಿ ನಾನು ಮಾರ್ಗದರ್ಶನ ಮಾಡುತ್ತೇನೆ ಇದು ನನ್ನ ನಿರ್ಧಾರವಾಗಿದೆ ಎಂದು ಹೇಳಿದ್ದರು.