Mysore
22
broken clouds

Social Media

ಶುಕ್ರವಾರ, 11 ಜುಲೈ 2025
Light
Dark

ನಾನು ಮೋದಿ ಪರಿವಾರ-ಮೋದಿಗಾಗಿ ಮೀಸಲು ಈ ಭಾನುವಾರ : ಮನೆಮನೆ ಸಂಪರ್ಕ ಕಾರ್ಯಕ್ರಮ !

ಮೈಸೂರು : ‘‘ನಾನು ಮೋದಿ ಪರಿವಾರ-ಮೋದಿಗಾಗಿ ಮೀಸಲು ಈ ಭಾನುವಾರ’’ ಎಂಬ ಘೋಷವಾಕ್ಯದೊಂದಿಗೆ ಮನೆ ಮನೆ ಸಂಪರ್ಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಎಸ್.ಎ.ರಾಮದಾಸ್ ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಅವರು, ಏ.೨೧ರ ಭಾನುವಾರ ಬೆಳಿಗ್ಗೆ ೮ಗಂಟೆಗೆ ನಗರಪಾಲಿಕೆ ವಾರ್ಡ್ ಸಂಖ್ಯೆ ೫೫ರ ಬೂತ್ ಸಂಖ್ಯೆ ೨೩೮ರಲ್ಲಿ ವಿದ್ಯಾರಣ್ಯಪುರಂನ ತಮ್ಮ ಮನೆಯಿಂದ ಸಂಪರ್ಕ ಕಾರ್ಯಕ್ರಮ ಆರಂಭಿಸಲಿದ್ದೇವೆ ಎಂದು ತಿಳಿಸಿದ್ದಾರೆ.

ಬೂತ್‌ನಲ್ಲಿ ೭೦೫ ಮತದಾರರಿದ್ದು, ಪ್ರತಿಯೊಬ್ಬರನ್ನೂ ಸಂಪರ್ಕ ಮಾಡಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ಮತ್ತು ಯೋಜನೆಗಳನ್ನು ಪ್ರತಿ ಮನೆ ಮನೆಗೆ ತಲುಪಿಸಿ ಈ ಬಾರಿ ಶೇ.ನೂರರಷ್ಟು ಮತದಾನವನ್ನು ಬೂತ್ ಸಂಖ್ಯೆ ೨೩೮ರಲ್ಲಿ ಮಾಡಿಸಿ ಬಿಜೆಪಿಗೆ ಹೆಚ್ಚು ಮತಗಳು ಬರುವಂತೆ ಮಾಡುವ ಉದ್ದೇಶದಿಂದ ಮನೆ ಮನೆ ಸಂಪರ್ಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

Tags:
error: Content is protected !!