ಮೈಸೂರು : ಮೈಸೂರಿನ ಕುವೆಂಪುನಗರದ ಬಳಿ ಎರಡು ದಿನಗಳ ಕಾಲ ನಡೆಯುವ ಮಾವಿನ ಹಣ್ಣುಗಳ ಸಂತೆ ಮೇಳದಲ್ಲಿ ಹಲವು ಬಗೆಯ ಹಣ್ಣುಗಳು, ತರಕಾರಿ ಹಾಗೂ ಸೊಪ್ಪುಗಳ ಮಾರಾಟ ಗಮನ ಸೆಳೆದಿದೆ.
ರಾಸಾಯನಿಕ ಗೊಬ್ಬರ ಬಳಸದೆ ನೈಸರ್ಗಿಕವಾಗಿ ಬೆಳೆದ ಹಣ್ಣುಗಳು, ತರಕಾರಿ ಹಾಗೂ ವಿವಿಧ ಸೊಪ್ಪುಗಳ ಮಾರಾಟ ಮಾಡುವ ಹಣ್ಣುಗಳ ಸಂತೆಯಲ್ಲಿ ಮೊದಲ ದಿನವೇ ಗ್ರಾಹಕರು ಖರೀದಿಯ ಭರಾಟೆ ಜೋರಾಗಿತ್ತು,
ಮೂರು ಎಕರೆ ಜಾಗದಲ್ಲಿ ಕೃಷಿ ಬೇಸಾಯ ಮಾಡುವ ರೈತ ಅವಿನಾಶ್ ಅವರು ಮೈಸೂರಿನ ಹೊರವಲಯದಲ್ಲಿರು ತಮ್ಮ ಮೂರು ಎಕರೆ ಜಮೀನಿನಲ್ಲಿ ತಮ್ಮ ಕುಟುಂಬಕ್ಕೆ ಬೇಕಾಗುವ ಆಹಾರ ಪದಾರ್ಥಗಳನ್ನು ಬೆಳೆದು ಜೊತೆಯಲ್ಲಿ ಸುಮಾರು 40ಕ್ಕೂ ಹೆಚ್ಚು ಬಗೆಯ ಹಣ್ಣುಗಳು, ತರಕಾರಿಗಳನ್ನು ಯಾವುದೇ ರಾಸಾಯನಿಕ ಗೊಬ್ಬರ ಬಳಸದೆ ನೈಸರ್ಗಿಕವಾಗಿ ಬೆಳೆದ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದೂ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನೈಸರ್ಗಿಕ ಪದಾರ್ಥಗಳನ್ನು ಖರೀದಿಸುತ್ತಿದ್ದಾರೆ.
ಇಂದು ಮತ್ತು ನಾಳೆ ನಡೆಯುವ 2 ದಿನಗಳ ಹಣ್ಣುಗಳ ಸಂತೆಯಲ್ಲಿ ಮಲ್ಲಿಕಾ ಮಾವು, ಬಾಳೆಕಾಯಿ, ಬಾಳೆ ದಿಂಡು, ತೆಂಗಿನ ಕಾಯಿ, ಕರಿಬೇವು, ಎಳೆನೀರು, ತೆಂಗಿನಕಾಯಿ, ಸ್ಟಾರ್ ಫ್ರುಟ್ಸ್ ಸೇರಿದಂತೆ ಅನೇಕ ಉತ್ಪನ್ನ ಗಳನ್ನು ಮಾರಾಟ ಮಾಡುತ್ತಿದ್ದಾರೆ.





