Mysore
27
few clouds

Social Media

ಗುರುವಾರ, 22 ಜನವರಿ 2026
Light
Dark

ಸಿದ್ದರಾಮಯ್ಯ ರಾಜೀನಾಮೆಗೆ ಹೈಕಮಾಂಡ್‌ ಸೂಚನೆ : ವಿರೋಧ ಪಕ್ಷ ನಾಯಕ ಅಶೋಕ್

r ashok

ನಂಜನಗೂಡು : ನವೆಂಬರ್ ನಲ್ಲಿ ಆಡಳಿತದಲ್ಲಿ ಕ್ರಾಂತಿ ಎಂದು ತಾವು ಹೇಳಿದ್ದು ನಿಜವಾಗಿದೆ ಎಂದ ವಿರೊಧ ಪಕ್ಷದ ನಾಯಕ ಆರ್ ಆಶೋಕ ಕಾಂಗ್ರೇಸ್ ಹೈಕಮಾಂಡ್ ಮುಕ್ಯಮಂತ್ರಿ ಸಿದ್ದರಾಮಯ್ಯವರ ರಾಜಿನಾಮೆ ಸೂಚನೆ ನೀಡಿದೆ ಎಂದರು.

ನಂಜನಗೂಡು ತಾಲೂಕು ಸಮುಚ್ಛಯದ ಬಾಗಿಲಲ್ಲಿ ಛಲವಾದಿ ನಾರಾಯಣ ಸ್ವಾಮಿ ಅವರೊಂದಿಗೆ ಽಡೀರ್ ಸಭೆ ನಡೆಸಿ ಅವರು ಮಾತನಾಡುತ್ತಿದ್ದರು, ನವೆಂಬರ್ ಕಾಂಗ್ರೆಸ್ ಕ್ರಾಂತಿ ನಿಜವಾಗುತ್ತಿದೆ ಎಂದ ಅವರು ರಾಜ್ಯದಲ್ಲಿ ಆಡಳಿತ ಸತ್ತು ಮಲಗಿದೆ ಮಹಿಳೆಯರನ್ನು ಬಸ್ ಹಚ್ಚಿಸಿ ಇಳಿಸುವದು ಬಿಟ್ಟರೆ ಬೇರೇನೂ ನಡೆಯುತ್ತಿಲ್ಲ ಎಂದರು. ಸತ್ತರಿವ ಆಡಳಿತ ನಡೆಸಲು ಸಿದ್ದರಾಮಯವರಾದರೂ ಒಂದೇ ಬೇರೆಯವರಾದರೂ ಒಂದೆ ಎಂದ ಅಶೋಕ ಜೀವವಿಲ್ಲದ ಆಡಳಿತ ನಡೆಸಲು ಯಾರಾದರೆನು ಎಂದು ಕಟುಕಿದರು.

ನಂಜನಗೂಡಿನ ೨೩ ಕರೆಗಳಿಗೆ ನೀರು ತುಂಬುವ ಯೋಜನೆಯೂ ಸೇರಿದಂತೆ ಎಲ್ಲ ಅಭಿವೃದ್ದಿ ಕಾರ್ಯಗಳು ಸ್ಥಗಿತವಾಗಿವೆ ಎಂದ ಅವರು ಘೋಷಣೆಯಾದ ಸಹಕಾರಿ ಸಂಘದ ಚುನಾವಣೆಯನ್ನು ಆಡಳಿತ ಪಕ್ಷ ವಿವಿಧ ಕಾರಣಗಳನೊಡ್ಡಿ ಮುಂದುಡುತ್ತಿದ್ದು ಮತ್ತೆ ಮುಂದೂಡಿದರೆ ತಾವು ನಂಜನಗೂಡಿಗೆ ಬಂದು ತಾಲೂಕು ಕಛೇರಿಗೆ ಬೀಗ ಜಡಿಯುವುದಾಗಿ ಅಶೋಕ ಎಚ್ಚರಿಕೆ ನೀಡಿದರು ಮಾಜಿ ಶಾಸಕ ಹರ್ಷವರ್ದನರ ಕೋರಿಕೆ ಮೇರೆಗೆ ಗುಂಡ್ಲುಪೇಟೆಯಿಂದ ಬರುತ್ತಿರುವಾಗ ಈ ಬೇಟಿ ಎಂದು ಅವರು ತಿಳಿಸಿದರು.

ಇದನ್ನೂ ಓದಿ:-ಮಹಿಳೆಯರಿಗೆ, ಇಲಾಖೆಗೆ ಶಕ್ತಿ ತುಂಬುವುದೇ ನನ್ನ ಗುರಿ : ಸಚಿವೆ ಹೆಬ್ಬಾಳಕರ್

ಮಾಜಿ ಶಾಸಕ ಬಿ ಹರ್ಷವರ್ಧನ್ ಮಾತನಾಡಿ ಕ್ಷೇತ್ರದಲ್ಲಿ ಆಡಳಿತ ವ್ಯವಸ್ಥೆ ಮುರಿದು ಬಿದ್ದಿದೆ ಅಭಿವೃದ್ದಿ ಕೆಲಸ ಸ್ಥಗಿತವಾಗಿದೆ ನಂಜನಗೂಡಿನ ಇತಿಹಾಸದಲ್ಲೇ ಕಂಡರಿಯದ ಹಾಡಾ ಹಗಲೇ ಮನೆ ಧರೋಡೆಗಳು ನಡೆಯುತ್ತಿವೆ ಎಂದರೆ ತಾಲೂಕಲ್ಲಿ ಪೊಲೀಸ್ ಇಲಾಖೆ ಏನು ಮಾಡುತ್ತಿದೆ ಎಂದು ಹರ್ಷವರ್ದನ್ ಕಿಡಿಕಾರಿದರು.

ಘೋಷಿತವಾದ ಕ್ಷೇತ್ರದ ಸಹಕಾರಿ ಸಂಘಗಳ ಚುನಾವಣೆಯನ್ನು ಸೋಲಿನ ಭಯದಿಂದಲೇ ವಿವಿಧ ನೆಪಗಳನ್ನೊಡ್ಡಿ ಮುಂದೂಡಲಾಗಿದೆ ಎಂದ ಅವರು ತಾಲೂಕು ಆಡಳಿತ ಸತ್ತೇ ಹೋಗಿದೆ ಎಂದರು.

ಈ ಸಭೆಯಲ್ಲಿ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ತಾಲುಕು ಬಿ ಜೇಪಿ ಅದ್ಯಕ್ಷ ಕೆಂಡಗಣ್ಣಪ್ಪ ನಗರಾದ್ಯಕ್ಷ ಸಿಧ್ದರಾಜು, ಎನ್ ಆರ್ ಕೃಷ್ಣಪ್ಪ ಗೌಡ , ಸಿಂಧುವಳ್ಳಿ ಕೆಂಪಣ್ಣ, ಮಾಜಿ ಶಾಸಕ ನಾಗೇಂದ್ರ. ಮಾಜಿ ಮಹಾಪೌರ ಶೈಲೇಂದ್ರ . ಲಾ ಮಹೇಶ, ಶ್ರೀಕಂಠ , ವಿನಯ ಕುಮಾರ್ , ಮಹೇಶ ಬಾಬು , ಶ್ರೀನಿವಾಸ ರೆಡ್ಡಿ ಮತ್ತೀತರರಿದ್ದರು.

Tags:
error: Content is protected !!