ಮೈಸೂರು: ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ, ಬೈಕ್ ಸವಾರ ಸ್ಥಳದಲ್ಲಿ ಮೃತಪಟ್ಟಿದ್ದು, ಹಿಂಬದಿ ಸವಾರನ ಸ್ಥಿತಿ ಚಿಂತಾಜನಕವಾಗಿದೆ.
ಮೈಸೂರು ತಾಲ್ಲೂಕು ಕಾಮನಕೆರೆ ಹುಂಡಿಯ, ಗಾರೆ ಕೆಲಸಗಾರ ಸ್ವಾಮಿ ( 32) ಮೃತಪಟ್ಟವರು. ಹೊಸ ಹೆಲ್ಮೆಟ್ ಇದ್ದರೂ ಪೆಟ್ರೋಲ್ ಟ್ಯಾಂಕ್ ಮೇಲೆ ಇಟ್ಟುಕೊಂಡು ಚಾಲನೆ ಮಾಡುತ್ತಿದ್ದರು ಮತ್ತು ಬೀದಿ ದೀಪವೂ ಇರಲಿಲ್ಲ ಎನ್ನಲಾಗಿದೆ.
ಗುರುವಾರ ರಾತ್ರಿ 9.50 ರ ಸಮಯದಲ್ಲಿ ದೇವೇಗೌಡ ವೃತ್ತದ ಎಂಪ್ರೋ ಹೋಟೆಲ್ ಎದುರು ಘಟನೆ ಸಂಭವಿಸಿದೆ. ತೀವ್ರವಾಗಿ ಗಾಯಗೊಂಡ ಹಿಂಬದಿ ಸವಾರನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ನಗರದ ಸಿದ್ದಾರ್ಥ ನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





