Mysore
23
scattered clouds

Social Media

ಶುಕ್ರವಾರ, 26 ಡಿಸೆಂಬರ್ 2025
Light
Dark

ಅರಮನೆ ಬಳಿ ಹೀಲಿಯಂ ಸಿಲಿಂಡರ್ ಸ್ಫೋಟ : ಮಹತ್ವದ ಮಾಹಿತಿ ಕೊಟ್ಟ ಗೃಹ ಸಚಿವ ಪರಮೇಶ್ವರ

ಮೈಸೂರು : ಮೈಸೂರು ಅರಮನೆ ಮುಂಭಾಗದಲ್ಲಿ ಸಿಲಿಂಡರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಅವರು ಮಹತ್ವದ ಮಾಹಿತಿ ನೀಡಿದ್ದಾರೆ.

ಗುರುವಾರ ಸಂಜೆ ಅರಮನೆಯ ಮುಂಭಾಗದಲ್ಲಿ ಹೀಲಿಯಂ ಸಿಲಿಂಡರ್‌ ಸ್ಫೋಟ ನಡೆದಿತ್ತು. ಬಲೂನುಗಳನ್ನ ಮಾರುತ್ತಿದ್ದ ವ್ಯಕ್ತಿಯ ಸಿಲಿಂಡರ್ ಸ್ಫೋಟಗೊಂಡು ಆ ವ್ಯಕ್ತಿ ಸ್ಥಳದಲ್ಲಿ ಮೃತಪಟ್ಟಿದ್ದರು. ಘಟನೆಯಲ್ಲಿ ಕೆಲವು ಗಾಯಗೊಂಡಿದ್ದಾರೆ.

ಇದನ್ನು ಓದಿ: ಸಿಲಿಂಡರ್‌ ಸ್ಫೋಟ : ಮೈಸೂರಿಗೆ NIA ತಂಡ ಭೇಟಿ, ಹಲವು ಆಯಾಮಗಳಿಂದ ಪರಿಶೀಲನೆ

ಈ ಕುರಿತಾಗಿ ಶುಕ್ರವಾರ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಡಾ. ಜಿ ಪರಮೇಶ್ವರ್, ಬಲೂನುಗಳನ್ನ ಮಾರುತ್ತಿದ್ದ ವ್ಯಕ್ತಿ ಹೀಲಿಯಂ ಸಿಲಿಂಡರ್ ಇಟ್ಕೊಂಡಿದ್ದ ಎಂಬ ಮಾಹಿತಿ ಇದೆ. ಆ ವ್ಯಕ್ತಿ ಉತ್ತರ ಪ್ರದೇಶ ಮೂಲದವನು ಎಂಬುವುದು ಗೊತ್ತಾಗಿದೆ. ಈ ಘಟನೆ ಯಾವ ರೀತಿ ನಡೆದಿದೆ ಎಂಬುವುದ ಬಗ್ಗೆ ತನಿಖೆ ನಡೆಯುತ್ತಿದೆ ಎಂದರು.

ವರದಿ ನೀಡಲು ಪೊಲೀಸ್ ಇಲಾಖೆಗೆ ಸೂಚನೆ ನೀಡಲಾಗಿದೆ. ಮೈಸೂರಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಅಲ್ಲಿ ಸುರಕ್ಷತೆಗೆ ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಸೂಚನೆ ನೀಡಲಾಗಿದೆ.‌ ಈ ಹಿಂದೆ ಕಾಶ್ಮೀರದಲ್ಲಾಟ ಘಟನೆ ಬಗ್ಗೆ ಮಾಹಿತೆ ಇದೆ. ಈಗಾಗಿ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಿ ವರದಿ ನೀಡಲು ಸೂಚನೆ ನೀಡಿದ್ದೇನೆ ಎಂದು ಹೇಳಿದರು.

ಇಂತಹ ಅಪಾಯಕಾರಿ ಸಿಲಿಂಡರ್ ಜನನಿಬಿಡ ಪ್ರದೇಶಗಳಲ್ಲಿ ಬಳಕೆ ಮಾಡುವುದು ಸರಿಯೇ ಎಂಬ ಪ್ರಶ್ನೆಗೆ, ಅವನಿಗೆ ಸಿಲಿಂಡರ್ ಹೇಗೆ ಸಿಗ್ತು? ಹೀಲಿಯಂ ಹೇಗೆ ಸಿಕ್ಕಿದೆ ಎಂಬ ಬಗ್ಗೆ ವರದಿ ಕೇಳಿದ್ದೇನೆ. ಮೈಸೂರು ನಗರ ಪೊಲೀಸ್ ಆಯುಕ್ತರು ಹಾಗೂ ಐಜಿಗೂ ಸೂಚನೆ ನೀಡದ್ದೇನೆ. ಅವರು ಏನು ವರದಿ ನೀಡುತ್ತಾರೆ ನೋಡೋಣ ಎಂದರು.

Tags:
error: Content is protected !!