Mysore
29
broken clouds
Light
Dark

ಮೈಸೂರಲ್ಲಿ ಇಂದು ಜೋರು ಮಳೆ: ಯಲ್ಲೋ ಅಲರ್ಟ್‌ ಘೋಷಣೆ

ಮೈಸೂರು: ರಾಜ್ಯದಲ್ಲಿ ಮುಂಗಾರು ಚುರುಕಾಗಿದ್ದು, ಈ ವರ್ಷ ಉತ್ತಮ ಮಳೆಯಾಗುತ್ತಿದೆ. ಕರಾವಳಿ ಸೇರಿದಂತೆ ನಾನಾ ಕಡೆಗಳಲ್ಲಿ ನಾಳೆಯಿಂದ ಮುಂಗಾರು ಬಿರುಸುಗೊಳ್ಳಲಿದ್ದು, ಇಂದು(ಜೂ.7) ಮೈಸೂರು, ತುಮಕೂರು ಹಾಗೂ ಕೋಲಾರ ಸೇರಿದಂತೆ ಜೋರು ಮಳೆ ಸುರಿಯಲಿದೆ ಎಂದು ಹವಮಾನ ಇಲಾಖೆ ತಿಳಿಸಿದೆ.

ನಿನ್ನೆ(ಜೂ.6) ಸಹ ಮೈಸೂರಿ ಹಲವೆಡೆ ಉತ್ತಮ ಮಳೆಯಾಗಿದ್ದು, ಕೆಲವು ಕಡೆ ಅವಾಂತರ ಸೃಷ್ಟಿಸಿದೆ. ಹೆಚ್.ಡಿ ಕೋಟೆಯಲ್ಲಿ ಮಳೆ ನೀರು ಮನೆಗೆ ನುಗ್ಗಿದ್ದು, ಚಾಮರಾಜನಗರದ ಹಾಗೂ ಗುಂಡ್ಲುಪೇಟೆಯಲ್ಲಿ ಜೋರು ಮಳೆ ಸುರಿದಿದೆ. ಪರಿಣಾಮ ಹೊಲ, ಗದ್ದೆಗಳು ಜಲಾವೃತಗೊಂಡಿದ್ದು, ಕೆಲವು ಕಡೆ ಕೆರೆ ಕಟ್ಟೆ ತುಂಬಿ ನೀರು ಹರಿಯುತ್ತಿದೆ.

ಇಂದು ಮೈಸೂರು,ಚಾಮರಾಜನಗರ, ಚಿಕ್ಕಬಳ್ಳಾಪುರ, ರಾಮನಗರ, ಕಲಬುರಗಿ, ವಿಜಯಪುರ ಹಾಗೂ ಬೆಳಗಾಗಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ. ಹಾಗಾಗಿ ಹವಮಾನ ಇಲಾಖೆ ಯಲ್ಲೋ ಅಲರ್ಟ್‌ ಘೋಷಿಸಿದೆ.