ಎಚ್.ಡಿ.ಕೋಟೆ/ಸರಗೂರು: ತಾಲ್ಲೂಕುಗಳಾದ್ಯಂತ ಇಂದು ಸಂಜೆ ಗುಡುಗು ಮಿಂಚು ಸಹಿತ ಧಾರಾಕಾರ ಮಳೆಯಾಗಿದ್ದು, ಕಾದ ಭೂಮಿಗೆ ತಂಪೆರೆದಿದೆ.
ಎಚ್.ಡಿ.ಕೋಟೆ ಹಾಗೂ ಸರಗೂರು ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಇಂದು ಸಂಜೆಯ ವೇಳೆಗೆ ಗುಡುಗು ಸಹಿತ ಧಾರಾಕಾರ ಮಳೆ ಸುರಿದಿದೆ.
ಕಳೆದ ಫೆಬ್ರವರಿ ತಿಂಗಳಿನಿಂದಲೂ ಉಷ್ಣಾಂಶ ಭಾರೀ ಏರಿಕೆಯಾಗಿದ್ದು, ಜನರು ತಣ್ಣನೆಯ ವಾತಾವರಣಕ್ಕಾಗಿ ಕಾದು ಕುಳಿತಿದ್ದರು. ಇಂದು ಸಂಜೆ ಇದ್ದಕ್ಕಿದ್ದಂತೆ ಧಾರಾಕಾರ ಮಳೆ ಸುರಿದಿದ್ದು, ಅನ್ನದಾತರ ಮೊಗದಲ್ಲಿ ಸಂತಸ ಮನೆ ಮಾಡಿದೆ.
ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದ್ದರಿಂದ ವಾಹನ ಸವಾರರು ಪರದಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇನ್ನು ಭಾರೀ ಮಳೆಯಿಂದ ವಿದ್ಯುತ್ ಸಂಪರ್ಕ ಕಡಿತವಾಗಿದ್ದು, ಜನರು ಕಗತ್ತಿನಲ್ಲೇ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಮಳೆಯಾದರೂ ಉಷ್ಣಾಂಶದಲ್ಲಿ ಯಾವುದೇ ರೀತಿಯಲ್ಲೂ ಇಳಿಕೆಯಾಗುವುದಿಲ್ಲ. ಮುಂದಿನ ಮೇ ತಿಂಗಳವರೆಗೂ ಉಷ್ಣಾಂಶ ಹೀಗೆಯೇ ಇರಲಿದೆ ಎಂದು ಹೇಳಿದೆ.
ಈ ಹಿನ್ನೆಲೆಯಲ್ಲಿ ಮಧ್ಯಾಹ್ನ 12 ಗಂಟೆಯಿಂದ 4 ಗಂಟೆಯವರೆಗೂ ವೃದ್ಧರು ಹಾಗೂ ಮಕ್ಕಳು ಮನೆಯಿಂದ ಹೊರಗೆ ಬರಬಾರದು ಎಂದು ಸೂಚನೆ ನೀಡಿದೆ.