ಮೈಸೂರು: ಕಾಂಗ್ರೆಸ್ ಸರ್ಕಾರದಿಂದ ರಾಜ್ಯದಲ್ಲಿ ಹಾಲಿನ ದರ ಏರಿಕೆ ಮಾಡಿದ್ದು, ಸರ್ಕಾರದ ನಡೆ ಸ್ವಾಗತಾರ್ಹ ವಾಗಿದೆ ಎಂದು ರಾಜ್ಯ ರೈತ ಒಕ್ಕೂಟಗಳ ಅಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜು ತಿಳಿಸಿದ್ದಾರೆ.
ಮೈಸೂರಿನಲ್ಲಿ ಇಂದು(ಮಾರ್ಚ್.28) ಈ ಕುರಿತು ಮಾಧ್ಯಮಗಳೊಂದಿಗೆ ಪ್ರತಿಕಿಯೆ ನೀಡಿದ ಅವರು, ಹಾಲಿನ ದರ ಏರಿಕೆ ಒಂದು ಕಡೆ ಸ್ವಾಗತಾರ್ಹವಾಗಿದೆ. ಕಳೆದ 2 ವರ್ಷಗಳಿಂದ ಕೊಡಬೇಕಿರುವ ಪ್ರೋತ್ಸಾಹ ಧನ ಬಂದಿಲ್ಲ. ಹಾಗಾಗಿ ಏರಿಕೆ ಹಣ ನೇರವಾಗಿ ರೈತರಿಗೆ ತಲುಪಬೇಕು ಎಂದು ಹೇಳಿದರು.
ಇನ್ನು ರಾಜ್ಯ ಸರ್ಕಾರ ಸುಮಾರು 700 ರಿಂದ 750 ಕೋಟಿ ರೂ. ಹಾಲಿ ಬಾಕಿ ಹಣ ಕೂಡಲೇ ಬಿಡುಗಡೆ ಮಾಡಬೇಕು. ಗ್ರಾಹಕರ ಮೇಲೆ ಹೊರ ಹಾಕಿ ಬಾಕಿ ಉಳಿಸಿಕೊಂಡಿರುವುದು ಖಂಡನೀಯವಾಗಿದೆ. ಹೀಗಾಗಿ
ಕೂಡಲೇ ಪ್ರೋತ್ಸಾಹ ಹಣವನ್ನೂ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.