ಮೈಸೂರು : ಬಿಜೆಪಿ ಸರ್ಕಾರದ ಅವಧಿಯಲ್ಲಿ ಯಡಿಯೂರಪ್ಪ ಕಂಪನಿಗೆ ಭೂಮಿ ನೀಡುವುದನ್ನು ನಾವು ತಡೆದೆವು. ಆದರೆ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಕೂಡಲೇ ಅನುಮತಿ ನೀಡಿದರು ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ ಕಿಡಿಕಾರಿದರು.
ಸೋಮವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು,ಕಾಂಗ್ರೆಸ್‌ಗೂ ಬಿಜೆಪಿಯವರಿಗೂ ಯಾವುದೇ ವ್ಯತ್ಯಾಸವಿಲ್ಲದಾಗಿದೆ. ನಾನು ಸಹ ಬಿಜೆಪಿಯಲ್ಲಿದ್ದವನು ಬಿಜೆಪಿ ಸರ್ಕಾರ ಬರಲು ಕಾರಣನಾದವನು. ಬಿಜೆಪಿ ಹಾಗೂ ಕಾಂಗ್ರೆಸ್ ಜನರ ವಿಶ್ವಾಸ ಕಳೆದುಕೊಳ್ಳುತ್ತಿವೆ. ಬಿಜೆಪಿಯು ಸುಳ್ಳು ಹೇಳಿ ಅಧಿಕಾರ ಕಳೆದುಕೊಂಡಿತು. ಈಗಿನ ಸರ್ಕಾರಕ್ಕೂ ಅದೇ ಪರಿಸ್ಥಿತಿ ಬರುತ್ತದೆ ಎಂದು ಹೇಳಿದರು.
ಜನಾರ್ಧರೆಡ್ಡಿಗೂ ಸಿದ್ದರಾಮಯ್ಯಗೂ ಸಹ ಯಾವುದೇ ವ್ಯತ್ಯಾಸವಿಲ್ಲ .ಜನರ ವಿಶ್ವಾಸ ಕಳೆದುಕೊಂಡಿರುವ ನೀವು ಸಾಧನಾ ಸಮಾವೇಶ ಮಾಡ್ತಿದ್ದೀರಿ? ನೀವು ಬರೀ ಸುಳ್ಳು ಬೂಟಾಟಿಕೆ ಮಾಡುತ್ತಿದ್ದೀರಿ. ಇದೊಂದು ಜನರಿಗೆ ಟೋಪಿ ಹಾಕುವ ಪ್ರಚಾರದ ಸರ್ಕಾರ ಎಂದು ಕುಟುವಾಗಿ ಟೀಕಿಸಿದರು





