Mysore
18
broken clouds

Social Media

ಶನಿವಾರ, 06 ಡಿಸೆಂಬರ್ 2025
Light
Dark

ಎಚ್.ಡಿ.ಕೋಟೆ | ಒಂದೇ ದಿನ ವಿವಿಧ ಬಡಾವಣೆಯಲ್ಲಿ ಕಳ್ಳತನ : ಸಿಕ್ಕಿಬಿದ್ದ ಖದೀಮರು

ಹೆಚ್.ಡಿ.ಕೋಟೆ : ಕಳೆದ ತಿಂಗಳಲ್ಲಿ ಒಂದೇ ದಿನ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಮನೆ ಬೀಗ ಮುರಿದು ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ಖದೀಮರನ್ನು ಹುಣಸೂರು ಪಟ್ಟಣದ ಠಾಣಾ ಸರಹದ್ದಿನ ಕಳ್ಳತನ ಪ್ರಕರಣದಲ್ಲಿ ಪತ್ತೆಹಚ್ಚಿ ಪೊಲೀಸರು ಬಂಧಿಸಿದ್ದಾರೆ.

ಹುಣಸೂರು ಪೋಲಿಸರು ಇನ್ನೂ ಹೆಚ್ಚಿನ ತನಿಖೆಗಾಗಿ ಎಚ್.ಡಿ.ಕೋಟೆ ಪೋಲಿಸ್ ಠಾಣೆಗೆ ಕಳುಹಿಸಿ ಕೊಡಲಾಗಿದ್ದು ಅದರಂತೆ ಎಚ್.ಡಿ.ಕೋಟೆ ಪೋಲಿಸ್ ಠಾಣೆಯ ಪಿಐ ಗಂಗಾಧರ್ ರವರು ಮೊ. ನಂ 275/2025 ಮತ್ತು 276/2025ರ ಪ್ರಕರಣದ ಆರೋಪಿಗಳಾದ ಮೈಸೂರು ನಿವಾಸಿ ಮಹಮ್ಮದ್ ಫರಾಜ್ ಹಾಗೂ ಸರಗೂರು ನಿವಾಸಿ ಫಯಾಜ್ ಎಂಬುವವರನ್ನು ವಶಕ್ಕೆ ಪಡೆದು ವಿವಿಧ ಬಡವಣೆಗಳಲ್ಲಿ ನಡೆದ ಕಳ್ಳತನದ ಬಗ್ಗೆ ವಿಚಾರಣೆ ನಡೆಸಿದ್ದಾರೆ. ತನಿಖೆ ಕೈಗೊಂಡು ಮತ್ತೆ ಆರೋಪಿಗಳನ್ನು ನ್ಯಾಯಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಅಪರಾಧ ವಿಭಾಗದ ಪಿಎಸ್ಐ ಸುರೇಶ್ ನಾಯಕ್ ಸಿಬ್ಬಂದಿಗಳಾದ ಸೈಯಾದ್ ಕಬೀರುದ್ದೀನ್, ಯೋಗೇಶ್, ಮೋಹನ್, ಬೀರಪ್ಪ ಇದ್ದರು.

Tags:
error: Content is protected !!