Mysore
28
few clouds

Social Media

ಬುಧವಾರ, 21 ಜನವರಿ 2026
Light
Dark

ಡಿಸೆಂಬರ್‌ ಅಂತ್ಯಕ್ಕೆ ಗ್ರೇಟರ್‌ ಮೈಸೂರು ಚಾಲ್ತಿ : ನಗರಾಭಿವೃದ್ಧ ಸಚಿವ ಸುರೇಶ್‌

ಮೈಸೂರು : 4 ಪಟ್ಟಣ ಪಂಚಾಯಿತಿಗಳು, 1 ನಗರಸಭೆ, 8 ಗ್ರಾಮ ಪಂಚಾಯಿತಿಗಳ ಪ್ರದೇಶಗಳನ್ನು ಸೇರಿಸಿಕೊಂಡು ಗ್ರೇಟರ್ ಮೈಸೂರು ರಚನೆ ಮಾಡಲು ನಿರ್ಧರಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಬಿ.ಎಸ್.ಸುರೇಶ್ ತಿಳಿಸಿದರು.

ಸಭೆಯ ಬಳಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಗರಾಭಿವೃದ್ಧಿ ಸಚಿವ ಬಿ.ಎಸ್.ಸುರೇಶ್ ಅವರು, ನಗರಪಾಲಿಕೆಯು ಪ್ರಸ್ತುತ 86 ಚ.ಕಿ.ಮೀ ವಿಸ್ತೀರ್ಣ ಹೊಂದಿದ್ದು, ಗ್ರೇಟರ್ ಮೈಸೂರು ರಚನೆಯಾದರೆ 333.46 ಚ.ಕಿ.ಮೀ ವಿಸ್ತೀರ್ಣವನ್ನು ಹೊಂದಲಿದೆ. 2011ರ ಜನಗಣತಿ ಪ್ರಕಾರ 11,19,705 ಜನಸಂಖ್ಯೆ ಇದ್ದು, 2025ರ ಯೋಜಿತ 14.16,671 ಜನಸಂಖ್ಯೆಯನ್ನು ಹೊಂದಿದ್ದು, ಅಂದಾಜು 4 ಲಕ್ಷ ಜನಸಂಖ್ಯೆ ಹೆಚ್ಚಳವಾಗಲಿದೆ. ಮುಂದಿನ ದಿನಗಳಲ್ಲಿ ಕಸ ನಿರ್ವಹಣೆ, ಕುಡಿಯುವ ನೀರು, ಮೂಲಸೌಕರ್ಯ, ವಿದ್ಯುತ್ ವ್ಯವಸ್ಥೆ, ಸಂಪರ್ಕ ಒದಗಿಸಲಾಗುತ್ತದೆ. ಈ ಪ್ರಸ್ತಾವನೆಯನ್ನು ಮುಂದಿನ ಅಥವಾ ನಂತರದ ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಲಾಗುವುದು ಎಂದರು.

ಇದನ್ನೂ ಓದಿ:-ಎಚ್‌.ಡಿ ಕೋಟೆ | ಸಾಲ ಭಾದೆ : ಯುವ ರೈತ ಆತ್ಮಹತ್ಯೆ

ಸಚಿವ ಸಂಪುಟ ಸಭೆಯಲ್ಲಿ ಗ್ರೇಟರ್ ಮೈಸೂರು ರಚನೆಗೆ ಅನುಮೋದನೆಯಾದ ಮೇಲೆ ಡಿಸೆಂಬರ್ ಅಂತ್ಯದೊಳಗೆ ಎಲ್ಲಾ ರೀತಿಯ ಪ್ರಕ್ರಿಯೆಗಳನ್ನು ಮುಗಿಸಿ ಚಾಲ್ತಿ ಬರುವಂತೆ ನೋಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ನುಡಿದರು.

ಗ್ರೇಟರ್ ಮೈಸೂರು ಸೇರಿದಂತೆ ಮೈಸೂರು ನಗರದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಸಿಎಂ ಅಧ್ಯಕ್ಷತೆಯಲ್ಲಿ ಎರಡು ಸಮಿತಿಗಳು ರಚನೆಯಾಗಲಿವೆ. ಮೊದಲನೆಯದಾಗಿ ಮೈಸೂರು ನಗರಪಾಲಿಕೆಯ ಅಭಿವೃದ್ಧಿ ಸಂಬಂಧ ಸಿಎಂ ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಲಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ ಉಪಾಧ್ಯಕ್ಷರಾಗಿರುವ ಸಮಿತಿಯಲ್ಲಿ ಶಾಸಕರು ಮತ್ತು ವಿಧಾನ ಪರಿಷತ್‌ನ ಸದಸ್ಯರು ಸದಸ್ಯರಾಗಲಿದ್ದು, ಗ್ರೇಟರ್ ಮೈಸೂರು ರಚನೆ ಸಂಬಂಧ ಅಗತ್ಯ ಸಲಹೆ ಸೂಚನೆಗಳನ್ನು ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು.

Tags:
error: Content is protected !!